ಹಾನಗಲ್: ಕಾಂಗ್ರೆಸ್ ಮುಖಂಡ ಮಾಜಿ ಸಿ.ಎಂ.ಸಿದ್ಧರಾಮಯ್ಯನವ್ರಿಗೆ ಹಾನಗಲ್ ನಲ್ಲಿ ಭವ್ಯವಾದ ಸ್ವಾಗತ ಸಿಕ್ಕಿದೆ. ಜನರ ಈ ಅಪಾರ ಪ್ರೀತಿಗೆ ಸಿ.ಎಂ.ಸಿದ್ಧರಾಮಯ್ಯನವ್ರು, ತಮ್ಮ ಟ್ವಿಟರ್ ಅಕೌಂಟ್ ಅಲ್ಲಿ ಆ ಘಳಿಗೆಯ ವೀಡಿಯೋ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ವಿಶ್ವಾಸ ಮತ್ತಷ್ಟು ಗಟ್ಟಿಗೊಂಡಿದೆ ಅಂತಲೂ ಹೇಳಿಕೊಂಡಿದ್ದಾರೆ.
ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ರಂಗೇರುತ್ತಿದೆ.ಈಗಾಗಲೇ ಪಕ್ಷಗಳ ಅಭ್ಯರ್ಥಿಗಳ ಆಯ್ಕೆನೂ ಆಗಿದೆ. ಅದರಂತೆ ಹಾನಗಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಶ್ರೀನಿವಾಸ್ ಮಾನೆಗೆ ಟಿಕೆಟ್ ನೀಡಲಾಗಿದೆ. ಶ್ರೀನಿವಾಸ್ ಮಾನೆ ನಾಮಪತ್ರ ಸಲ್ಲಿಸೋ ಟೈಮ್ ಅಲ್ಲಿ ಹಾನಗಲ್ ಗೆ ಬಂದಿದ್ದ ಸಿದ್ಧರಾಮಯ್ಯನವ್ರಿಗೆ, ಇಲ್ಲಿಯ ಜನ ಅಪಾರ ಪ್ರೀತಿ ತೋರಿದ್ದಾರೆ.ಭವ್ಯ ಸ್ವಾಗತವನ್ನೂ ಕೋರಿದ್ದಾರೆ.
PublicNext
07/10/2021 06:07 pm