ಬೆಂಗಳೂರು: ಕಮಲ ದಳ ಟ್ವಿಟ್ ವಾರ್. ಹೌದು ರೀ ಮಾಜಿ ಸಿಎಂ ಕುಮಾರ್ ಸ್ವಾಮಿಗಳು, ಆರ್ ಎಸ್ ಎಸ್ ವಿಷಯ ಕೆಣಕಿದ್ದೇ ತಡ. ಎಚ್ಡಿಕೆ ಮೇಲೆ ಕೇಸರಿ ಪಡೆಯ ದಂಡೇ ಮುಗಿಬಿದ್ದಿದೆ. ಟ್ವಿಟರ್ ಗಳ ಬಾಣವನ್ನ ಬೀಸ್ತಾನೆ ಇದೆ.ಹಾಗಂತ ಕುಮಾರ್ ಸ್ವಾಮಿಗಳು ಸುಮ್ನೆ ಕುಳಿತ್ತಿಲ್ಲ. ಅವ್ರು ಪ್ರತಿ ದಾಳಿ ಮಾಡ್ತಾನೆ ಇದ್ದಾರೆ.ಅದಕ್ಕೇನೆ ಈಗ ಟ್ವಟರ್ ಲೋಕ ರಣಾಂಗಣ ಆಗಿದೆ.
ಎಚ್ಡಿಕೆ ಆರ್ ಎಸ್ ಎಸ್ ಸಂಘಟನೆಯನ್ನ ಟೀಕಿಸಿದರು.ಆರ್‌ಎಸ್‌ಎಸ್ ನಿಂದ 4 ಸಾವಿರ ಐಎಎಸ್, ಐಪಿಎಸ್ ಗಳಿಗೆ ಟ್ರೈನಿಂಗ್ ಎಂದು ಆರೋಪ ಕೂಡ ಮಾಡಿದ್ದರು. ಇಷ್ಟೇ ನೋಡಿ.ಇಡೀ ಕೇಸರಿಪಡೆನೆ ದಳದ ವಿರುದ್ಧ ರೊಚ್ಚಿಗೆದ್ದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಂತು ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಮನೆಯಲ್ಲಿ ಕುಳಿತು ಪುಸ್ತಕ ಓದಿದರೆ ಸಾಲದು. ಆರ್ ಎಸ್ ಎಸ್ ಬಗ್ಗೆ ತಿಳಿಯಲು ನೀವು ಶಾಖೆಗೆ ಬನ್ನಿ ಅಂತ ಹೇಳಿಯೇ ಬಿಟ್ಟಿದ್ದಾರೆ.
ಸಿ.ಟಿ.ರವಿಯವ್ರ ಈ ಟ್ವೀಟ್ ಗೆ ತಕ್ಷಣವೇ ಕುಮಾರ್ ಸ್ವಾಮಿಗಳು ಟ್ವೀಟ್ ಮಾಡಿಯೇ ಬಿಟ್ಟಿದ್ದಾರೆ. ರವಿ ಅವ್ರೆ ನಿಮ್ಮ ಸಂಘದೊಳಗಿನ ವಾಸ್ತವಾಂಶಗಳನ್ನ ನೋಡಿದವ್ರೆ ಬರೆದ ಪುಸ್ತಕವನ್ನ ನಾನು ಓದಿದ್ದೇನೆ. ಇನ್ನು ನೇರವಾಗಿ ನೋಡಿದ್ದರೇ ಇನ್ನೆಷ್ಟು ಸತ್ಯಗಳನ್ನ ನಾನು ನೋಡಬಹುದಿತ್ತು ಅಂತ ನೀವೇ ಊಹಿಸಿ ಅಂತ ಸರಿಯಾಗಿಯೇ ಕೊಟ್ಟಿದ್ದಾರೆ ಎಚ್ಡಿಕೆ. ಉಳಿದಂತೆ ಕಮಲ-ದಳದ ಟ್ವೀಟ್ ವಾರ್ ಎಲ್ಲಿ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಸದ್ಯಕ್ಕೆ ಸರಿಯಾಗಿಯೇ ಬೆಂಕಿ ಹತ್ತಿಕೊಂಡಿದೆ.
PublicNext
06/10/2021 02:17 pm