ಬೆಂಗಳೂರು:ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲರ ಗಾಂಧಿ ನಡೆ ಕೃಷ್ಣೆಯ ಕಡೆಗೆ ಅಭಿಯಾನವನ್ನ,ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಲವಾಗಿ ಟೀಕಿಸಿದ್ದಾರೆ.ಎಲೆಕ್ಷನ್ ಬಂದಾಗೆಲ್ಲ ಶಾಸಕ ಎಂ.ಬಿ.ಪಾಟೀಲರು ಹೀಗೆ ಗಿಮಿಕ್ ಮಾಡ್ತಾನೇ ಇರುತ್ತಾರೆ ಅಂತಲೂ ಚುಚ್ಚಿದ್ದಾರೆ.
ಹಾನಗಲ್ ಮತ್ತು ಸಿಂದಿ ಉಪಚುನಾವಣೆ ಇದೆ. ಅದಕ್ಕೇನೆ ಅಕ್ಟೋಬರ್-೨ ರಿಂದಲೇ ಪಾಟೀಲರು ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಅಭಿಯಾನ ಮಾಡ್ತಿದ್ದಾರೆ.
ಇವರೇನೆ ಮಾಡಿದ್ರೂ ಕೂಡ ಎರಡೂ ಕ್ಷೇತ್ರದಲ್ಲಿ ಬಿಜೆಪಿನೇ ಬರೋದು ಅಂತ ಅತೀ ವಿಶ್ವಾದಲ್ಲಿಯೇ ಹೇಳಿದ್ದಾರೆ ಗೋವಿಂದ್ ಕಾರಜೋಳ. ಅಂದ್ಹಾಗೆ ಶಾಸಕ ಎಂ.ಬಿ.ಪಾಟೀಲರು,ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ತ್ವರಿತವಾಗಿ ಜಾರಿ ಆಗಬೇಕು ಅಂತ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ.
PublicNext
05/10/2021 01:23 pm