ಹುಬ್ಬಳ್ಳಿ: ನಾವೆಲ್ಲ ಅನ್ನದಾತರ ಕುಟುಂಬಕ್ಕೆ ಸೇರಿದವರು, ಅವರ ಶಕ್ತಿ ಹೆಚ್ಚಿಸಲು ಬಿಜೆಪಿ ಸರ್ಕಾರ ತಂದಿರುವ ಸುಧಾರಣೆಗಳು ರೈತರಿಗೆ ಪೂರಕವಾಗಿವೆ. ಇದೆಲ್ಲ ಕುತಂತ್ರ, ತಂತ್ರಗಾರಿಕೆಯನ್ನು, ದಾರಿ ತಪ್ಪಿಸುವ ಪ್ರಯತ್ನವನ್ನು ಪ್ರತಿಪಕ್ಷ ಮತ್ತು ಕೆಲವು ಸಂಘಟನೆಗಳು ಮಾಡುತ್ತಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಉ.ಪ್ರ ಘಟನೆ ಬಗ್ಗೆ ಅಲ್ಲಿನ ಸರ್ಕಾರ ಸೂಕ್ತ ಕ್ರಮ ವಹಿಸಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದೆ. ಘಟನೆ ನಡೆಯಬರದಾಗಿತ್ತು, ಈಗ ಸರ್ಕಾರ ಎಲ್ಲ ಕ್ರಮವಹಿಸಿ ಎಲ್ಲವನ್ನೂ ತಿಳಿಗೊಳಿಸುವ ಕಾರ್ಯ ಮಾಡುತ್ತಿದೆ. ರೈತರು ಸಬಲೀಕರಣ ಆಗಬಾರದು, ಅವರು ಉನ್ನತಿ ಹೊಂದಬಾರದು, ಬಲಿಷ್ಠರಾಗಬಾರದು, ಅಸಹಾಯಕಾರಿಬೇಕು ಅನ್ನೋದು ಅವರ ಕಲ್ಪನೆ. ಇದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ವಿಜೇಯೇಂದ್ರರನ್ನ ತಡವಾಗಿ ಉಪಚುನಾವಣೆ ಪಟ್ಟಿಗೆ ಸೇರಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಪಕ್ಷದವರೇ ಪ್ರತ್ಯೇಕವಾಗಿ, ವಿಶೇಷವಾಗಿ ಬೆಳಕನ್ನು ಚೆಲ್ಲುವುದು ಅಷ್ಟು ಸೂಕ್ತವಲ್ಲ. ಎಲ್ಲರಿಗೂ ಪಕ್ಷದಲ್ಲಿ ಸ್ಥಾನಮಾನವಿದೆ, ಎಲ್ಲರಿಗೂ ಜವಾಬ್ದಾರಿ ಇದೆ. ರಾಜಕೀಯದಲ್ಲಿ ಎಲ್ಲರಿಗೂ ಅವಕಾಶ ಇದ್ದೆ ಇರುತ್ತೆ, ಅವಕಾಶ ಸಿಕ್ಕೇ ಸಿಗುತ್ತದೆ. ಇದಕ್ಕೆ ವಿಶೇಷ ಬಣ್ಣ, ವ್ಯತ್ಯಾಸವನ್ನು ನಿರ್ಮಾಣ ಮಾಡುವುದಕ್ಕೆ ಯಾವುದೇ ಅವಕಾಶ ಇಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಬಂದರೆ ಮತ್ತೆ ಜಾತಿಗಣತಿ ವಿಚಾರವಾಗಿ ಮಾತನಾಡಿದ ಅವರು, ಅವರು ಅಧಿಕಾರಕ್ಕೆ ಬರಲ್ಲ, ಕನಸು ಮನಸಲ್ಲೂ ಅವರು ಬರಲ್ಲ.
ಅವರ ಪಕ್ಷ ಈಗಾಗಲೇ ಹರಿದು ಹಂಚಿಹೋಗಿರುವ ಪಕ್ಷ. ಸಿಎಂ ನಾನಾಗಬೇಕು ಅಂತ ಅವರರವರಲ್ಲೇ ಜಗಳ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
PublicNext
05/10/2021 12:39 pm