ಬೆಂಗಳೂರು:ರಾಜ್ಯದ ಉಪ ಚುನಾವಣೆಯ ಉಸ್ತುವಾರಿ ಆಯ್ಕೆಯ ಪಟ್ಟಿ ಹೊರಬೀಳುತ್ತಿದ್ದಂತೇನೆ,ಬಿ.ವೈ.ವಿಜಯೇAದ್ರ ಬೆಂಬಲಿಗರು ಸಿಟ್ಟಿಗೆದ್ದು ಬಿ.ಜೆ.ಪಿ.ಪ್ರಮುಖರ ವಿರುದ್ಧ ಕಿಡಿಕಾರಿದ್ದರು.ಆದರೆ, ಸಂಜೆ ಹೊತ್ತಿಗೆ ಮ್ಯಾಟರೇ ಚೇಂಜ್ ಆಗಿದೆ.ಚುನಾವಣೆ ಉಸ್ತುವಾರಿ ಆಯ್ಕೆ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಸೇರ್ಪಡೆ ಆಗಿಯೇ ಬಿಟ್ಟಿದೆ.
ಕೊನೆಗೂ ಬಿ.ಎಸ್.ವೈ ಪುತ್ರ ವಿಜಯೇಂದ್ರ ಹೆಸರು,ಉಪಚುನಾವಣೆಯ ಉಸ್ತುವಾರಿ ಪಟ್ಟಿಗೆಯಲ್ಲಿ ಸೇರ್ಪಡೆ ಆಗಿಯೇ ಬಿಟ್ಟಿದೆ.ಭಾನುವಾರ ನಡೆದ ಪಕ್ಷದ ಕೋರ್ ಕಮೀಟಿಯಲ್ಲಿ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯ ಉಸ್ತುವಾರಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದಿತ್ತು..ಸೋಮುವಾರ ಚುನಾವಣೆ ಉಸ್ತುವಾರಿಗಳ ಆಯ್ಕೆ ಪಟ್ಟಿನೂ ಹೊರ ಬಿತ್ತು.ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿ, ಸಿಂಧಗಿ ಕ್ಷೇತ್ರಕ್ಕೆ ಸಚಿವ ಗೋವಿಂದ್ ಕಾರಜೋಳ,ಹಾನಗಲ್ ಕ್ಷೇತ್ರಕ್ಕೆ ಮುರಗೇಶ್ ನಿರಾಣಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ...
ಅಷ್ಟೇ ನೋಡಿ...ಬಿ.ಎಸ್.ವೈ ಪುತ್ರ ವಿಜಯೇಂದ್ರ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟಾದರು..ಬಿ.ಎಲ್.ಸಂತೋಷ್ ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಂಡಾಮAಡಲ ಆಗಿದ್ದರು.ಬೆಂಬಲಿಗರ ಈ ನಡೆಯಿಂದ ವಿಜಯೇಂದ್ರ ಬೇಸರಗೊಂಡು ಹೀಗೆಲ್ಲ ಮಾಡ್ಬೇಡಿ...ಮಾತ್ ಆಡ್ಬೇಡಿ ಅಂತಲೂ ಬುದ್ದಿ ಹೇಳಿದ್ದರು..
ಇಷ್ಟೆಲ್ಲ ಬೆಳವಣಿಗೆ ಆಗಿ ಸಂಜೆ ಆಗೋ ಹೊತ್ತಿಗೆ ವಿಷಯವೇ ಚೇಂಜ್ ಆಗಿದೆ..ಉಸ್ತುವಾರಿ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಹೆಸರೇ ಸೇರ್ಪಡೆ ಆಗಿದೆ.ಸಿಂಧಗಿ ಬದಲು ಹಾನಗಲ್ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ... ಇದು ಈ ಕ್ಷಣದ ಅಪ್ ಡೇಟ್..
PublicNext
04/10/2021 06:37 pm