ಬೆಂಗಳೂರು:ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಉಸ್ತುವಾರಿ ಬಿ.ಎಸ್. ವೈ ಪುತ್ರ ವಿಜಯೇಂದ್ರಗೆ
ಸಿಗದ ಕಾರಣ ವಿಜಯೇಂದ್ರ ಅಭಿಮಾನಿಗಳು ಬಿಜೆಪಿ ಪ್ರಮುಖರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅದು ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ...
ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚುತ್ತಲೇ ಇದೆ. ಅದರಲ್ಲೂ ಬಿ.ಎಸ್.ವೈ ಪುತ್ರ ವಿಜಯೇಂದ್ರ ಈ ಚುನಾವಣೆ ಉಸ್ತುವಾರಿ ಕಂಡಿತಾ ತೆಗೆದುಕೊಳ್ತಾರೆ ಅನ್ನೊ ನಂಬಿಕೆ ವಿಜಯೇಂದ್ರ ಬೆಂಬಲಿಗರಲ್ಲಿತ್ತು.ಆದರೆ,ಅವರ
ಆಸೆ ಹುಸಿಯಾಗಿದೆ.
ಈ ಕಾರಣಕ್ಕೇನೆ ಬಿ.ಎಲ್.ಸಂತೋಷ್ ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧ ಸೋಷಿಲ್ ಮೀಡಿಯಾದಲ್ಲಿಯೇ ವಿಜಯೇಂದ್ರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿ.ಎಲ್.ಸಂತೋಷ್ ವಿಘ್ನ ಸಂತೋಷಿಗೆ ಬುದ್ಧಿಗೆ
ಏನ್ ಹೇಳ್ಬೇಕು ಅಂತಲೂ ಬರೆದುಕೊಂಡು ಸಿಟ್ಟು ಹೊರಹಾಕಿದ್ದಾರೆ..
ಆದರೆ, ಬೆಂಬಲಿಗರ ಈ ಆಕ್ರೋಶದ ನಡೆಯನ್ನ ಬಿ.ವೈ.ವಿಜಯೇಂದ್ರ ಸಪೋರ್ಟ್ ಮಾಡಿಯೇ ಇಲ್ಲ. ಪಕ್ಷದ ಮುಖಂಡರ ವಿರುದ್ಧ ಈ ರೀತಿ ಮಾತನಾಡೋದು ಸರಿಯಲ್ಲ ಅಂತಲೇ ಸಿಟ್ಟಾಗಿದ್ದಾರೆ.
ಹಾನಗಲ್ ಮತ್ತು ಸಿಂಧಗಿಯಲ್ಲಿ ನಾನು ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಈ ಕ್ಷೇಚಾರದಲ್ಲಿ ಪ್ರಚಾರ ಮಾಡುತ್ತೇನೆ ಅಂತಲೇ ಟ್ವಿಟ್ ಮಾಡೋ ಮೂಲಕ ವಿಜಯೇಂದ್ರ ಬುದ್ದಿ ಮಾತು ಹೇಳಿ ಕಾಂಟ್ರವರ್ಸಿಗೆ ತೆರೆ ಎಳೆದ್ದಾರೆ.
PublicNext
04/10/2021 04:43 pm