ಲಖನೌ(ಉತ್ತರ ಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್ ಅವರು ಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆಗೆ ಕಾಟಾಚಾರಕ್ಕೆ ಮಾಲೆ ಹಾಕಿದ್ದಾರೆ. ಇದರ ವಿಡಿಯೋ ಸದ್ಯ ವೈರಲ್ ಅಗುತ್ತಿದೆ. ಹಾಗೂ ಯೋಗಿ ಆದಿತ್ಯನಾಥ್ ಅವರ ನಡೆ ಬಗ್ಗೆ ಚರ್ಚೆಯಾಗುತ್ತಿದೆ.
ಗಾಂಧೀಜಿ ಪ್ರತಿಮೆ ಎದುರು ಬಂದ ಯೋಗಿ, ಪ್ರತಿಮೆಯ ಪಾದಕ್ಕೆ ಹೂಮಾಲೆಯನ್ನು ಬಿಸಾಕಿದ್ದಾರೆ. ನಂತರ ಪ್ರತಿಮೆಗೆ ಗೌರವ ತೋರದೇ ಅಲ್ಲಿಂದ ಹೋಗಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಈ ನಡೆಗೆ ಗಾಂಧಿವಾದಿಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ರಾಜ್ಯದ ಸಿಎಂ ಹುದ್ದೆಯಲ್ಲಿ ಇರುವವರು ರಾಷ್ಟ್ರಪಿತನಿಗೆ ಈ ರೀತಿ ಅಗೌರವ ತೋರುವುದು ಒಪ್ಪಲಾಗದು ಎಂದಿದ್ದಾರೆ.
PublicNext
03/10/2021 09:48 am