ಮಂಗಳೂರು : ಸಿದ್ದರಾಮಯ್ಯರೇ ಒಬ್ಬ ದೊಡ್ಡ ಭಯೋತ್ಪಾದಕ ಅನ್ನೋದು ನನಗೆ ಅನಿಸುತ್ತೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.ಅವರ ಅತಂತ್ರ ಸ್ಥಿತಿಯಲ್ಲಿ ಅವರು ಇಂಥ ಹೇಳಿಕೆಗಳನ್ನು ಕೊಡ್ತಿದ್ದಾರೆ,ತಾಲಿಬಾನ್ ಸಂಸ್ಕೃತಿ ಅವರದ್ದು, ಅವರು ಸಿಎಂ ಆಗಿದ್ದಾಗಲೇ ರಾಜ್ಯದಲ್ಲಿ ಅತೀ ಹೆಚ್ಚು ಹತ್ಯೆಗಳು ನಡೆದಿವೆ.24ಕ್ಕೂ ಅಧಿಕ ಹಿಂದೂಗಳ ಹತ್ಯೆ ಅವರ ಅವಧಿಯಲ್ಲಿ ನಡೆದಿದೆ.
ಅವರ ಕಾಲಘಟ್ಟದಲ್ಲೇ ಅತೀ ಹೆಚ್ಚು ನಡೆದಿದೆ, ಅದಕ್ಕೆ ಹೇಳಿದ್ದು ಅವರದ್ದು ತಾಲಿಬಾನ್ ಸಂಸ್ಕೃತಿ, ಅವರೇ ಭಯೋತ್ಪಾದಕ ಅಂತ,ಕೊಲೆ, ಸುಲಿಗೆ, ಗೋಹತ್ಯೆ ಅವರ ಕಾಲದಲ್ಲೇ ಹೆಚ್ಚು ನಡೆದಿರುವಾಗ ಅವರಿಗೆ ಎಲ್ಲಿದೆ ನೈತಿಕತೆ?ಕಾಂಗ್ರೆಸ್ ಈಗ ಮುಳುಗಿದ ಹಡಗು, ಹೀಗಾಗಿ ಕಾಂಗ್ರೆಸ್ ನ ಹತ್ತಾರು ಜನ ಬಿಜೆಪಿ ಸೇರಲು ಸಿದ್ದತೆ ಮಾಡಿದ್ದಾರೆ.
ನಮ್ಮ ಪಕ್ಷಕ್ಕೆ ಸೇರಲು ಬರುವ ಹಲವರು ನನ್ನ ಸಂಪರ್ಕದಲ್ಲೂ ಇದ್ದಾರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸ ಜನರಿಗಿಲ್ಲ ಕಾಂಗ್ರೆಸ್ ನ ಹತ್ತಾರು ಶಾಸಕರ ಸಹಿತ ಕೆಲ ಪ್ರಮುಖರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದರು...
PublicNext
29/09/2021 11:53 am