ದಾವಣಗೆರೆ: ನಾನು "ಚಣ್ಣ" ಹಾಕ್ತಿದ್ದಾಗ 30 ರೂಪಾಯಿಗೆ ಕ್ವಿಂಟಾಲ್ ಗೋಧಿ, ಜೋಳ ಸಿಗ್ತಿತ್ತು... ಈಗ ಪ್ಯಾಂಟ್ ಹಾಕ್ಲಿಕ್ಕೆ ಶುರು ಮಾಡಿದ್ಮೇಲೆ 3 ಸಾವಿರ ರೂ. ಆಗೈತೆ..!
ಇದು ಬೆಲೆ ಏರಿಕೆ ಬಗ್ಗೆ ಸಂಸದ ಜಿ. ಎಂ. ಸಿದ್ದೇಶ್ವರ್ ವಿಶ್ಲೇಷಿಸಿದ ಪರಿ. ದಾವಣಗೆರೆಯ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಪದೇ ಪದೇ ಉಡಾಫೆ ಹೇಳಿಕೆ ನೀಡುವ ಮೂಲಕ ವಿಪಕ್ಷಗಳಿಗೆ ಆಹಾರವಾಗುತ್ತಿದ್ದಾರೆ. ಈ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಉಡಾಫೆ ಹೇಳಿಕೆ ಕೊಟ್ಟು ಟೀಕೆಗೂ ಗುರಿಯಾಗಿದ್ದರು. ಈಗ ಮತ್ತೆ ಅದೇ ಧಾಟಿಯಲ್ಲಿ ಮಾತನಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆಗ ಕೂಲಿಗೆ ಬರುವವರಿಗೆ 5 ರೂಪಾಯಿ ನೀಡುತ್ತಿದ್ದೇವೆ. ಎಂಟಾಣೆಗೆ ಪೆಟ್ರೋಲ್ ಸಿಗ್ತಾ ಇತ್ತು. ಆದ್ರೆ, ಕಾಲ ಬದಲಾದಂತೆ ರೇಟ್ ಜಾಸ್ತಿಯಾಗುತ್ತದೆ. ಅದನ್ನೇ ದೊಡ್ಡದಾಗಿ ಮಾಡಿದರೆ ಹೇಗೆ...? ನಾವು ಸಹ ಬೆಲೆ ಏರಿಕೆ ನಿಯಂತ್ರಿಸಲು ತಲೆಕೆಡಿಸಿಕೊಂಡಿದ್ದೇವೆ ಎಂದ ಸಿದ್ದೇಶ್ವರ್, ಮೂವತ್ತು ವರ್ಷಗಳ ಹಿಂದಿಗೂ ಇಂದಿನ ಹೋಲಿಕೆ ಮಾಡುವ ಅವರೇ ಸ್ವತಃ ಈಗ ನಗೆಪಾಟಲಿಗೀಡಾಗಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತ ಸಂಘಟನೆಗಳು ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ. ಬಂದ್ ನ ಅಗತ್ಯವೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ, ಕೃಷಿ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳು ರೈತರಿಗೆ ಪ್ರಯೋಜನ. ಅದೇ ರೀತಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗುವ ಕೆಲಸ ಮಾಡಿದ್ದಾರೆ. ಆದ್ರೂ ರೈತರು ಹೋರಾಟ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
PublicNext
27/09/2021 05:58 pm