ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ: ಸಚಿವ ಮುನಿರತ್ನ

ಬೆಂಗಳೂರು: ನಾನು ಬಿಜೆಪಿ ಸೇರಿದ್ದು ಪೂರ್ವಜನ್ಮದ ಪುಣ್ಯ. ಬಿಜೆಪಿ ಸೇರಿ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದಿಂದ (ಒಬಿಸಿ) ಬುಧವಾರ ಸಂಜೆ ಸಮುದಾಯದ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, 'ನಾನು ಕಾಂಗ್ರೆಸ್‌ನಿಂದ ಬಂದವನು. ನಾನು ಅಲ್ಲಿ ಈ ರೀತಿ ಹಿಂದುಳಿದ ವರ್ಗಗಳ ಕಾರ್ಯಕ್ರಮ ನೋಡಿರಲಿಲ್ಲ. ಬೇರೆ ವರ್ಗಗಳ ಕಾರ್ಯಕ್ರಮ ಇರುತ್ತಿತ್ತು. ನಮಗೂ ಒಂದು ಕುರ್ಚಿ ಹಾಕುತ್ತಿದ್ದರು. ಕುಳಿತು ಎದ್ದು ಬರುತ್ತಿದ್ದೆವು ಅಷ್ಟೇ. ಈ ರೀತಿ ಕಾರ್ಯಕ್ರಮ ಕಾಣುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬಿಜೆಪಿಗೆ ಬಂದಿರುವುದಕ್ಕೆ ಖುಷಿ ಇದೆ. ದೊಡ್ಡ ಕುಟುಂಬಕ್ಕೆ ಬಂದಿದ್ದೇವೆ' ಎಂದು ಹೇಳಿದರು.

Edited By : Vijay Kumar
PublicNext

PublicNext

23/09/2021 01:10 pm

Cinque Terre

29.19 K

Cinque Terre

3