ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಾಠಿಯಲ್ಲಿ ಯಾಕೆ ಬರೆದಿಲ್ಲ ಎಂದವರಿಗೆ ತಕ್ಕ ಉತ್ತರ ಕೊಟ್ಟ ಮಹಿಳಾ ಅಧಿಕಾರಿ

ಬೆಳಗಾವಿ: ಗಣೇಶ ವಿಸರ್ಜನೆ ವೇಳೆಯೂ ನಗರದಲ್ಲಿ ಮರಾಠಿಗರು ಭಾಷೆ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಗಣೇಶ ವಿಸರ್ಜನೆ ಅಂಗವಾಗಿ ನಗರದ ಕಪಿಲೇಶ್ವರ ಹೊಂಡದ ಬಳಿ ಮಹಾನಗರ ಪಾಲಿಕೆಯು ಫ್ಲೆಕ್ಸ್ ಹಾಕಿಸಿತ್ತು. ಇದರಲ್ಲಿ ಮರಾಠಿ ಭಾಷೆಗೆ ಆದ್ಯತೆ ನೀಡಿಲ್ಲ ಎಂದು ಕೆಲ ಕಿಡಿಗೇಡಿಗಳು ಕ್ಯಾತೆ ತೆಗೆದಿದ್ದಾರೆ.

ಇದಕ್ಕೆ ಕುಪಿತರಾದ ಮಹಾಗರ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್, ಕ್ಯಾತೆ ತೆಗೆದ ಕಿಡಿಗೇಡಿಗಳ ಮೇಲೆ ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಕೆಲ ಹೊತ್ತು ವಾಗ್ವಾದ ನಡೆಯಿತು‌. ನಂತರ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Edited By : Nagaraj Tulugeri
PublicNext

PublicNext

20/09/2021 11:28 am

Cinque Terre

143.45 K

Cinque Terre

22