ನವದೆಹಲಿ: ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ಪಂಜಾಬ್ ಸಿಎಂ ಯಾರಾಗ್ತಾರೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ರಾಜಕೀಯ ಬೆಳವಣಿಗೆಗಳು ಕ್ಷಣಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸುಖ್ಜಿಂದರ್ ಸಿಂಗ್ ರಂಧವ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಹುತೇಕ ಫೈನಲ್ ಮಾಡಿದೆ ಎನ್ನಲಾಗುತ್ತಿದೆ.
ಸುಖ್ಜಿಂದರ್ ಸಿಂಗ್ ರಂಧವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಸುಖ್ಜಿಂದರ್ ಸಿಂಗ್ ರಂಧವ ಆಗಲಿ, ಅವರ ಆಪ್ತರಾಗಲಿ ಈ ಬಗ್ಗೆ ಎಲ್ಲಿಯೂ ಸುಳಿವು ನೀಡಿಲ್ಲ. ಮೂಲಗಳ ಪ್ರಕಾರ ರಂಧವ ಅವರೇ ಪಂಜಾಬ್ನ ನೂತನ ಸಿಎಂ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಸುಖ್ಜಿಂದರ್ ಸಿಂಗ್ ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಕ್ಯಾಬಿನೆಟ್ನಲ್ಲಿ ಜೈಲು ಮತ್ತು ಸಹಕಾರ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
PublicNext
19/09/2021 05:17 pm