ಈಗಾಗಲೇ ಶಿವಸೇನೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬಿದ್ದಿರುವುದು ಎಲ್ಲರಿಗೂ ಗೊತ್ತು. ಆದರೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ಬಿಜೆಪಿ ಹಾಗೂ ಶಿವಸೇನೆ ಮತ್ತೆ ಒಂದಾಗಲಿದೆ ಎನ್ನುವಂತಿದೆ. ಹೌದು ಔರಾಂಗಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿವೊಂದಲ್ಲಿ ಕೇಂದ್ರ ಸಚಿವ ರೌಸಾಹೇಬ್ ದಾನ್ವೆ ಸೇರಿದಂತೆ ಹಲವು ನಾಯಕರನ್ನು ಭವಿಷ್ಯದ ಸಹೋದ್ಯೋಗಿಗಳು ಎಂದು ಠಾಕ್ರೆ ಸಂಬೋಧಿಸಿರುವುದೇ ಈ ಊಹಾಪೋಹಕ್ಕೆ ಕಾರಣವಾಗಿದೆ.
ನನ್ನ ಹಿಂದಿನ, ಈಗಿನ ಹಾಗೂ ಮತ್ತೆ ನಾವು ಒಂದಾದರೆ ಭವಿಷ್ಯ ಸಹೋದ್ಯೋಗಿಗಳೇ ಎಂದು ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಸಂಬೋಧಿಸಿದ್ದಾರೆ. ಬಳಿಕ ಮಾಧ್ಯಮದ ಎದುರು ಮಾತನಾಡುವ ವೇಳೆ ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಠಾಕ್ರೆ, ಹಿಂದಿನ ಹಾಗೂ ಪ್ರಸ್ತುತ ಸಹೋದ್ಯೋಗಿಗಳು ಅಲ್ಲಿ ಇದ್ದುದರಿಂದ ತಾವು ಈ ರೀತಿ ಹೇಳಿದ್ದಾಗಿ ಸಬೂಬು ನೀಡಿದ್ದಾರೆ.
PublicNext
18/09/2021 07:06 pm