ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಬೂಟ್ ನೆಕ್ಕುವ ಮೂಲಕ ಮಂತ್ರಿಯಾಗಿಲ್ಲ: ಸುಬ್ರಮಣಿಯನ್ ಸ್ವಾಮಿ

ಬಿಜೆಪಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಾನು ಬೂಟ್‌ ನೆಕ್ಕುವ ಮೂಲಕ ಮಂತ್ರಿಯಾಗಿಲ್ಲ” ಎಂದು ಅವರು ಗುರುವಾರ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಕರ್ನಾಟಕ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡುತ್ತಾ, ಸ್ವಂತ ಪಕ್ಷ ಮತ್ತು ಅದರ ನಾಯಕತ್ವದ ವಿರುದ್ಧ ಮಾತನಾಡುವುದು ಸುಬ್ರಮಣಿಯನ್ ಸ್ವಾಮಿಯವರ ಸ್ವಾಭಾವ ಎಂದು ಹೇಳಿದ್ದರು.

ಈ ಬಗ್ಗೆ ಇಂಗ್ಲೀಷ್ ಪತ್ರಿಕೆಯೊಂದು ಮಾಡಿದ್ದ ಸುದ್ದಿಯ ಲಿಂಕ್ ಜೊತೆ ಟ್ವೀಟ್ ಮಾಡಿರುವ ಸುಬ್ರಮಣ್ಯನ್‌ ಸ್ವಾಮಿ, “ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ‘ಸ್ವತಂತ್ರ ರಾಜಕಾರಣಿ’ ಎಂದು ಕರೆದಿದ್ದಾರೆ. 3 ಬಾರಿ ಲೋಕಸಭೆ ಸೇರಿದಂತೆ ಆರು ಅವಧಿಯ ಸಂಸದನಾಗಿದ್ದು ಮತ್ತು ಎರಡು ಬಾರಿ ಮಂತ್ರಿಯಾಗಿದ್ದು, ‘ಬೂಟ್‌ ನೆಕ್ಕುವ ಮೂಲಕ ಅಲ್ಲ’. ಬದಲಾಗಿ ರೋಮಾಂಚಕ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಸತ್ಯವನ್ನು ತಿಳಿಸಿ” ಎಂದು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

18/09/2021 11:27 am

Cinque Terre

64.28 K

Cinque Terre

13

ಸಂಬಂಧಿತ ಸುದ್ದಿ