ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ದೇಗುಲ ಉಳಿಸುವ ಪ್ರಯತ್ನ ಮಾಡಲಿಲ್ಲ: ಪ್ರತಾಪ್ ಸಿಂಹ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದೇವಸ್ಥಾನಗಳ ಮೇಲೆ ಪ್ರೀತಿ ಇದ್ದಿದ್ದರೆ ಅವರು ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡ್ತಾ ಇರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದರು.

ಸಿದ್ದರಾಮಯ್ಯ ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನು ತಮ್ಮ ಆಡಳಿತದಲ್ಲಿ ಮಾಡಲಿಲ್ಲ. ಹಿಂದೂ ದೇವಸ್ಥಾನಗಳ ಮೇಲೆ ಸಿದ್ದರಾಮಯ್ಯನವರಿಗೆ ಪ್ರೀತಿಯಿದ್ದಿದ್ದರೆ ಅವರ ಆಡಳಿತದಲ್ಲಿ ಈ ತಪ್ಪು ಆದೇಶವನ್ನು ತಿದ್ದಬಹುದಿತ್ತು. ಸಿದ್ದರಾಮಯ್ಯ ಅವರು ಆಡಳಿತವಾಧಿಯಲ್ಲಿ ಕೋರ್ಟ್‌ಗೆ ವರದಿ ಕೊಡಬೇಕಿತ್ತು. 8 ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. ಆದರೆ ಅವರು ಆ ಕೆಲಸ ಮಾಡಿರಲಿಲ್ಲ ಎಂದು ದೂರಿದರು.

Edited By : Nagaraj Tulugeri
PublicNext

PublicNext

17/09/2021 02:06 pm

Cinque Terre

30.34 K

Cinque Terre

8