ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿವಿ ಸಾಗರಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಿ.

ಬೆಂಗಳೂರು: ಭದ್ರಾ ಜಲಾಶಯದಿಂದ ಹಿರಿಯೂರಿನ ವಿವಿ ಸಾಗರ ಡ್ಯಾಂಗೆ 5 ಟಿಎಂಸಿ ನೀರು ಹಂಚಿಕೆ ಮಾಡಬೇಕು ಎಂದು ಹಿರಿಯೂರು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರವದ ಗಮನ ಸೆಳೆದರು.

ಇದೇ ವೇಳೆ ಅಧಿವೇಶನದಲ್ಲಿ ಮಾತನಾಡಿದ ಶಾಸಕಿ ಕೆ ಪೂರ್ಣಿಮಾ ವಿವಿ ಸಾಗರ ಜಲಾಶಯ ನನ್ನ ಕ್ಷೇತ್ರದಲ್ಲಿ ಇದೆ. ಈಗ ಭದ್ರಾ ದಿಂದ ವಿವಿ ಸಾಗರಕ್ಕೆ 2 ಟಿಎಂಸಿ ನೀರು ಹರಿಸಲಾಗುತ್ತಿದೆ. ಈ ನೀರು ಸಾಲದು. ಈ ಎರಡೂ ಟಿಎಂಸಿ ನೀರಿನಲ್ಲಿ ಚಳ್ಳಕೆರೆ, ಮೊಳಕಾಲ್ಮೂರಿಗೆ ಕೊಡಬೇಕಾಗುತ್ತದೆ. ಅಲ್ಲಿಗೆ ನೀರು ಕೊಟ್ಟರೆ ನನ್ನ ಕ್ಷೇತ್ರದ ಜನರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಆಗಾಗಿ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಜಲಸಂಪನ್ಮೂಲ ಸಚಿವರು ಭದ್ರಾ ದಿಂದ ಐದು ಟಿಎಂಸಿ ನೀರು ಹಂಚಿಕೆ ಮಾಡಿ, ಡ್ಯಾಂ ಗೆ ನೀರು ಹರಿಸಿದರೆ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರಿಗೆ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸಂಬಂಧಪಟ್ಟ ಶಾಸಕರನ್ನು ಸಭೆಗೆ ಕರೆಸಿ ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Edited By : Manjunath H D
PublicNext

PublicNext

14/09/2021 07:21 pm

Cinque Terre

62.99 K

Cinque Terre

3