ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶ ಕಂಡ ಸುಳ್ಳುಗಾರ, ಭ್ರಷ್ಟ ಯಾರೆಂದರೆ ಅದು ಮಿಸ್ಟರ್ ಮೋದಿ: ಉಗ್ರಪ್ಪ

ಮೈಸೂರು: ದೇಶ ಕಂಡ ಅತ್ಯಂತ ಸುಳ್ಳುಗಾರ ಹಾಗೂ ಭ್ರಷ್ಟ ಪ್ರಧಾನಿ ಯಾರು ಅಂದ್ರೆ ಅದು ನರೇಂದ್ರ ಮೋದಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.

ನಿನ್ನೆ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಉಗ್ರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಬಹುತೇಕ ಯೋಜನೆಗಳು ಜನವಿರೋಧಿಯಾಗಿವೆ. ಅವರ ಜನಪ್ರಿಯತೆಯೂ ಶೇ. 65ರಿಂದ ಶೇ. 24ಕ್ಕೆ ಕುಸಿದಿದೆ. ಅವರ ಸ್ವಂತ ರಾಜ್ಯದಲ್ಲಿ ಅವರ ಹೆಸರು ಹೇಳಿಕೊಂಡು ವೋಟ್ ಪಡೆಯಲು ಆಗುತ್ತಿಲ್ಲ. ರಾಫೆಲ್ ಹಗರಣದ ಬಗ್ಗೆ ಅವರು ಈಗಲೂ ತನಿಖೆಗೆ ತಯಾರಿಲ್ಲ. ಇದರಲ್ಲಿ ₹39 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಜಂಟಿ ಸದನ ಸಮಿತಿ ತನಿಖೆಗೆ ಮೋದಿ ಹಿಂದೇಟು ಹಾಕುತ್ತಿದ್ದಾರೆ ಎಂದರು.

ಜಾತಿ ಆಧಾರಿತವಾಗಿ ವೋಟ್ ಗಿಟ್ಟಿಸಿಕೊಳ್ಳಲು ಗುಜರಾತ್‌ನಲ್ಲಿ ಪಟೇಲ್ ಸಮುದಾಯದವರನ್ನು ಸಿಎಂ ಮಾಡಿದ್ದಾರೆ. ನಾವು ವೈರಾಣು ವಿರುದ್ಧ 21 ದಿನ ಯುದ್ಧ ಮಾಡಿ ನೆಮ್ಮದಿಯಿಂದ ಇರೋಣ’ ಎಂದಿದ್ದರು. ಆದರೆ, ಆಗ 565 ಇದ್ದ ಪಾಸಿಟಿವ್‌ ಪ್ರಕರಣ ಬಳಿಕ ಕೋಟಿ ದಾಟಿತು. ಇದಕ್ಕಿಂತ ದೊಡ್ಡ ಸುಳ್ಳಿನ ಉದಾಹರಣೆ ಬೇಕೇ? ಎಂದ ಉಗ್ರಪ್ಪ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Nagaraj Tulugeri
PublicNext

PublicNext

14/09/2021 09:23 am

Cinque Terre

70.21 K

Cinque Terre

107

ಸಂಬಂಧಿತ ಸುದ್ದಿ