ನವದೆಹಲಿ: ಹೃದಯವಂತ ಮಾನವರಷ್ಟೇ ಕ್ಷಮಿಸುವ ಗುಣ ಹೊಂದಿರುತ್ತಾರೆ. ನಮ್ಮಲ್ಲಿ ಯಾರೂ ಪರಸ್ಪರ ಕೆಟ್ಟ ಭಾವನೆಗಳನ್ನು ಇರಿಸಿಕೊಳ್ಳಬಾರದು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಿದ್ದಾರೆ.
ಪ್ರಧಾನಿಗಳು ಕ್ಷಮೆ ಕೇಳಲು ಮುಖ್ಯ ಕಾರಣ ಸಂವತ್ಸರಿ ಪರ್ವ. ಜೈನ ಧರ್ಮೀಯರಲ್ಲಿ ಆಚರಿಸಲಾಗುವ ಪರ್ಯುಷನ್ ಪರ್ವದ ಬಗ್ಗೆ ಮಾತನಾಡಿದ ಪ್ರಧಾನಿ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಂವತ್ಸರಿ ಪರ್ವದ ಕೊನೆಯ ದಿನ ಅದು ಪರ್ಯುಷನ್ ಪರ್ವ. ಅಂದರೆ ಕ್ಷಮೆ ಕೇಳುವ ಹಾಗೂ ಮೈತ್ರಿಯ ಪ್ರತೀಕ. ಕ್ಷಮಿಸುವ ಗುಣದ ಬಗ್ಗೆ ಮಾತನಾಡಿದ ಮೋದಿ, ಕ್ಷಮಿಸುವುದು ಶಕ್ತಿವಂತನ ಗುಣ ಎಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ಕ್ಷಮಿಸುವವರಿಗೂ, ಕ್ಷಮಿಸಲ್ಪಡುವವನಿಗೂ ದೇವರ ಆಶೀರ್ವಾದ ಲಭಿಸುತ್ತದೆ. ಎಂದು ಮೋದಿ ಹೇಳಿದ್ದಾರೆ.
PublicNext
11/09/2021 07:49 am