ಅಥಣಿ(ಬೆಳಗಾವಿ ಜಿಲ್ಲೆ): ಕಳೆದ ಇಪ್ಪತ್ತು ವರ್ಷಗಳಿಂದ ನಾವು ಈ ಸಕ್ಕರೆ ಕಾರ್ಖಾನೆ ದಿನಗೂಲಿ ಮತ್ತು ಕನ್ಸಲೆಟೆಡ್ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ ಈಗಲಾದರೂ ನಮಗೆ ವೇತನ ಹೆಚ್ಚಳ ಮಾಡಿ ನಮ್ಮ ಕೆಲಸಕ್ಕೆ ಸೇವಾ ಭದ್ರತೆಯನ್ನು ನೀಡಿ ಎಂದು ಮನವಿ ಮಾಡಲು ಹೋದ ಕಾರ್ಮಿಕರಿಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಕೊಲೆ ಮಾಡುವುದಾಗಿ ಸಕ್ಕರೆ ಕಾರ್ಖನೆಯ ಎಂ.ಡಿ. ಹೇಳಿದ್ದಾನೆ ಎಂದು ಆರೋಪಿಸಿ ಸಾವಿರಾರು ಕಾರ್ಮಿಕರು ಬೃಹತ್ ಪ್ರತಿಭಟನೆ ಮಾಡಿರುವ ಘಟನೆ ಬೆಳಗಾವಿ ಅಥಣಿ ತಾಲೂಕಿನಲ್ಲಿ ನಡೆದಿದೆ.
ಹೀಗೆ ಡೌನ್ ಎಂ.ಡಿ. ಡೌನ್, ಅವಾಚ್ಯ ಮತ್ತು ಕಾರ್ಮಿಕರನ್ನು ಕೀಳಾಗಿ ನೋಡಿ ಕೊಲೆ ಬೆದರಿಕೆ ಹಾಕಿರುವ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕಾಗಿ ಬಿರು ಬಿಸಿಲಲ್ಲಿ ಪ್ರತಿಭಟನೆ ಮಾಡುತ್ತಿರುವ ಅಥಣಿ ತಾಲೂಕಿನ ಹಲ್ಯಾಳದ ಕೃಷ್ಣಾ ಸಕ್ಕರೆ ಕಾರ್ಖಾನೆಯ ಕಾರ್ಮಿಕರು.
ಇವರು ಕಳೆದ ೨೦ ವರ್ಷಗಳಿಂದ ಸಕ್ಕರೆ ಕಾರ್ಖಾನೆ ಆರಂಭವಾಗಿದನಿಂದಲೂ ಸುಮಾರು ೫೫೦ ಕಾರ್ಮಿಕರು ದಿನಗೂಲಿ ಸೇರಿದಂತೆ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ, ಆದರೆ ಹಲವು ವರ್ಷಗಳಿಂದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದೆ ಸತಾಯಿಸಿದ್ದಾರೆ. ನಿನ್ನೇಯು ಕೂಡಾ ಕಾರ್ಮಿಕರ ಯೂನಿಯನ್ ನಿಂದ ತಮ್ಮ ಬೇಡಿಕೆಗಳನ್ನು ಬಗ್ಗೆ ಎಂಡಿ ಹತ್ತಿರ ಬಳಿ ಕೇಳಿದಾಗ. ಕಾರ್ಮಿಕರು ನಾಯಿಗಳು ಇದ್ದಂತೆ, ಇನ್ನೊಂದು ಬಾರಿ ನೀವೆ ಏನಾದರೂ ಈ ತರದ ಬೇಡಿಕೆಗಳನ್ನು ತಂದು ನಮ್ಮ ಮುಂದೆ ಇಟ್ಟರೆ ನಿಮ್ಮನ್ನ ಓಡಾಡಿಸಿಕೊಂಡು ಕೊಂದು ಬಿಡುತ್ತೇವೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂತೆ ಎಂದು ಕಾರ್ಮಿಕರು ಆರೋಪಿಸಿ ಇಂದು ಸಕ್ಕರೆ ಕಾರ್ಖಾನೆ ಮುಂದೆ ಸಾವಿರಾರು ಕಾರ್ಮಿಕರು ಪ್ರತಿಭಟನೆ ಮಾಡಿದರು. ಇದರಿಂದಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಕೂಡಾ ಉಂಟಾಗಿತ್ತು.
PublicNext
09/09/2021 05:26 pm