ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೆ.30 ರಂದು ಉಪಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಇಂದಿನಿಂದ ಪ್ರಚಾರದ ಕಣಕ್ಕಿಳಿದಿದ್ದು, ಈ ಉಪಚುನಾವಣೆ ದೀದಿಗೆ ಸವಾಲಾಗಿದ್ದು, ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಸೆ.30 ರಂದು ಪಶ್ಚಿಮ ಬಂಗಾಳದ ಭವಾನಿಪುರ, ಜಂಗೀಪುರ ಮತ್ತು ಸಂಸರ್ ಗಾಂಜ್ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಅಖಾಡಕ್ಕಿಳಿಯುತ್ತಿರುವ ಸಿಎಂ ಮಮತಾ ಬ್ಯಾನರ್ಜಿ ಇಂದಿನಿಂದ ಪ್ರಚಾರದ ಅಖಾಡಕ್ಕಿಳಿದ್ದಾರೆ. ಇನ್ನು ಟಿಎಂಸಿ ನಾಯಕರಾದ ಜಾಕಿರ್ ಹುಸೇನ್ ಮತ್ತು ಅಮಿರುಲ್ ಇಸ್ಲಾಂ ಅವರು ಜಂಗೀಪುರ ಮತ್ತು ಸಂಸರ್ ಗಾಂಜ್ ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಿದ್ದಾರೆಂದು ಟಿಎಂಸಿ ಅಧಿಕೃತವಾಗಿ ತಿಳಿಸಿದೆ.
PublicNext
08/09/2021 08:18 pm