ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಂಇಎಸ್ ಗೆದ್ದಿದ್ರೆ ಎಲ್ಲವೂ ಸರಿ ಸೋಲು ಕಂಡಿದ್ದಕ್ಕೆ ಇವಿಎಂ ನೆಪ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ

ಬೆಳಗಾವಿ: ಭಾಷಾ ರಾಜಕಾರಣ ಮಾಡಿಕೊಂಡು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಮಾಡುತ್ತಿದ್ದ ಎಂಇಎಸ್ ಈಗ ಸೋತು ಸುಣ್ಣವಾಗಿದೆ. ಅವರು ಗೆಲವು ಸಾಧಿಸಿದ್ದರೆ ಎಲ್ಲವೂ ಸರಿ ಇದೆ ಎನ್ನುತ್ತಿದ್ದರು. ಸೋಲು ಕಂಡರೆ ಅದು ಇವಿಎಂ ಮಷೀನ್ ಸರಿ ಇಲ್ಲ ಅಂತನಾ ಎಂದು ಪುಂಡ ಎಂಇಎಸ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲವು ಸಾಧಿಸಿ ಸ್ಪಷ್ಟ ಬಹುಮತ ನೀಡಿರುವ ಬೆಳಗಾವಿ ನಗರ ಮತದಾರರು ಉತ್ತಮ ಫಲಿತಾಂಶ ನೀಡಿದ್ದಾರೆ. ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಎಂಇಎಸ್ ಇದು ಬಿಜೆಪಿ ಗೆಲುವಲ್ಲ. ಇವಿಎಂ ಮಷೀನ್ ಗೆಲವು ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಸೋಲು ಕಂಡವರ ಆರೋಪಕ್ಕೆ ಉತ್ತರ ಕೊಡುವುದಿಲ್ಲ. ಎಂಇಎಸ್ ಇಲ್ಲಿಯವರೆಗೆ ಬೆಳಗಾವಿ ನಗರದಲ್ಲಿ ಭಾಷಾ ರಾಜಕಾರಣದ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿತು. ಪಾಲಿಕೆ ಚುನಾವಣೆಯಲ್ಲಿ ಅವರು ಗೆಲವು ಸಾಧಿಸಿದ್ದರೆ ಸರಿ ಇದೆ ಎನ್ನುತ್ತಿದ್ದರು. ಆದರೆ ಈಗ ಸೋಲು ಕಂಡಿದ್ದಾರೆ. ಇವಿಎಂ ಮಷೀನ್ ಸರಿ ಇಲ್ಲ ಅಂಥಾನಾ ಎಂದು ಮರು ಪ್ರಶ್ನಿಸಿದರು.

ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವದ ದಿನವನ್ನು ಹೆಚ್ಚಿಗೆ ಮಾಡಬೇಕೆಂಬ ಗಣೇಶ ಮಂಡಳಿಗಳ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ತಜ್ಞರ ಸಲಹೆಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧಾರ ಕೈಗೊಂಡು ಘೋಷಣೆ ಮಾಡಿದ್ದಾರೆ. ಎಲ್ಲರ ಜತೆಗೆ ಚರ್ಚೆ ಮಾಡಿಯೇ ಇಡೀ ರಾಜ್ಯಕ್ಕೆ ನಿಯಮಾವಳಿಯನ್ನು ಅನುಸರಿಸಲು ಹೇಳಿದ್ದಾರೆ ಎಂದರು.

ಕೊರೊನಾ ಮೂರನೇ ಅಲೆ ಹರಡುವ ಸಂದರ್ಭದಲ್ಲಿ ಎಷ್ಟೆ ಎಚ್ಚರಿಕೆಯಿಂದ ಇದ್ದರೂ ಸಾಲದು. ಜೀವ ಮೊದಲು ಆಮೇಲೆ ಜೀವ ಉಳಿಸುವ ಅವಶ್ಯಕತೆ ಇದೆ. ಒಂದು ನಿರ್ಧಾರ ಸರಕಾರ ಈಗಾಗಲೇ ಪ್ರಕಟಿಸಿದೆ. ಅದರ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ ಎಂದರು.

Edited By : Nagesh Gaonkar
PublicNext

PublicNext

07/09/2021 08:06 pm

Cinque Terre

107.16 K

Cinque Terre

2