ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬುರ್ಖಾ ಬೆಂಬಲಿಸುವವರು ತಾಲಿಬಾನಿಗಳು': ಬುರ್ಖಾ ನಿಷೇಧಕ್ಕೆ ಸೊಗಡು ಶಿವಣ್ಣ ಆಗ್ರಹ

ತುಮಕೂರು: "ಬುರ್ಖಾ ಧರಿಸುವುದನ್ನು ನಬೆಂಬಲಿಸುವವರು ತಾಲಿಬಾನಿಗಳು" ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬುರ್ಖಾ ಧರಿಸುವುದನ್ನು ನಮ್ಮಲ್ಲಿ ನಿಷೇಧಿಸಬೇಕು. ಬುರ್ಖಾ ತೊಡುವುದು ನಮ್ಮ ಸಂಸ್ಕೃತಿಯಲ್ಲ. ಹೆಣ್ಣುಮಕ್ಕಳು ಮುಕ್ತವಾಗಿ ಬದುಕಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ಮೂಲಕ ಸೊಗಡು ಶಿವಣ್ಣ ಅವರು ಇಲ್ಲಿಯವರೆಗೆ ತಣ್ಣಗಾಗಿದ್ದ ಬುರ್ಖಾ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಇದೀಗ ಬುರ್ಖಾ ಕುರಿತಾದ ಚರ್ಚೆಗಳು ಮತ್ತೆ ಪುನರಾರಂಭ ಆಗುವ ಸಾಧ್ಯತೆಗಳಿವೆ.

Edited By : Vijay Kumar
PublicNext

PublicNext

07/09/2021 03:54 pm

Cinque Terre

40.29 K

Cinque Terre

14