ಬೆಂಗಳೂರು: ಬರುವ ವಿಧಾನಸಭೆ ಚುನಾವಣೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಅವರ ಮುಂದಾಳತ್ವದಲ್ಲೇ ಬಿಜೆಪಿ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದರು.
ಅಮಿತ್ ಶಾ ಅವರ ಈ ಹೇಳಿಕೆ ಸದ್ಯ ಸ್ವಪಕ್ಷದಲ್ಲೇ ಹಲವು ನಾಯಕರ ನಡುವೆ ಅಸಮಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ಹಾಗು ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಇನ್ನೋರ್ವ ನಾಯಕ ಜಗದೀಶ್ ಶೆಟ್ಟರ್, ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಚರ್ಚಿಸಿದ್ದಾರೆ ಎನ್ನಲಾಗಿದೆ. ಮೂಲ ಬಿಜೆಪಿ ಅಲ್ಲದವರಿಗೆ ಮುಖ್ಯಮಂತ್ರಿಯಂತಹ ಪರಮೋಚ್ಛ ಹುದ್ದೆ ನೀಡಿರುವುದು ಪಕ್ಷದಲ್ಲಿ ಹಲವರ ಆಂತರಿಕ ಬೇಗುದಿಗೆ ಕಾರಣವಾಗಿತ್ತು. ಈ ಬಗ್ಗೆ ಕಾಣಸಿಕೊಂಡಿದ್ದ ಭಿನ್ನಮತಕ್ಕೆ ಈಗ ಅಮಿತ್ ಶಾ ಹೇಳಿಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಯಡಿಯೂರಪ್ಪ ಮತ್ತು ಶೆಟ್ಟರ್ ಮಧ್ಯೆ ನಡೆದ ಚರ್ಚೆಯಲ್ಲಿ ಈ ಅಂಶವೇ ಪ್ರಮುಖವಾಗಿತ್ತು ಎಂದು ಮೂಲಗಳು ಹೇಳಿವೆ.
PublicNext
05/09/2021 12:19 pm