ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮತದಾರರ ಕೈಯಲ್ಲಿ ಚಿಹ್ನೆ ಇರುವ ಚೀಟಿ ಕೊಟ್ಟ ಬಿಜೆಪಿ: ಲಕ್ಷ್ಮಿ ಕೆಂಡಾಮಂಡಲ

ಬೆಳಗಾವಿ: ಕುಂದಾನಗರಿಯ ಬೆಳಗಾವಿಯ ಪಾಲಿಕೆಗೆ ಇಂದು ಮತದಾನ ನಡೆದಿದೆ. ಎಲ್ಲಡೇ ಉತ್ಸಾಹದಿಂದ ಮತದಾರರು ಮತಗಟ್ಟೆಗಳಿಗೆ ಮತ ಚಲಾಯಿಸಲು ಬರುತ್ತಿದ್ದಾರೆ. ಆದರೆ ಮತದಾರರ ಮತಗಟ್ಟೆಗಳಿಗೆ ಹೋಗುವಾಗ ಅವರಿಗೆ ಬಿಜೆಪಿ ಚಿಹ್ನೆ ಮತ್ತು ಮೋದಿ ಭಾವಚಿತ್ರದ ಚೀಟಿಗಳನ್ನು ನೀಡಿ ಅವರಿಗೆ ಬಿಜೆಪಿಗೆ ಮತ ಹಾಕುವಂತೆ ಒತ್ತಾಯ ಮಾಡುತ್ತಿದ್ದಾರೆ, ಮತ್ತು ಇದು ಚುನಾವಣಾ ನೀತಿ ಸಂಹಿತೆ ಸಂಪೂರ್ಣ ಉಲ್ಲಂಘನೆ ಯಾಗಿದೆ ಈ ಬಗ್ಗೆ ನಾನು ಚುನಾವಣಾ ಅಧಿಕಾರಿಗಳಿಗೆ ದೂರು ನೀಡುವೆ ಕಾಂಗ್ರೆಸ್ ಶಾಸಕಿ ಎಂದು ಲಕ್ಷ್ಮಿ ಹೆಬ್ಬಾಳಕರ ಕೆಂಡಾಮಂಡಲವಾಗಿರುವ ಘಟನೆ ವಾರ್ಡ ನಂ 45 ರಲ್ಲಿ ನಡೆದಿದೆ.

ಇದೆ ವೇಳೆ ಆ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯು ಕೂಡಾ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದರು. ಮತ್ತು ಬಿಜೆಪಿಯ ಈ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Edited By : Manjunath H D
PublicNext

PublicNext

03/09/2021 02:01 pm

Cinque Terre

123.52 K

Cinque Terre

22