ಬೆಂಗಳೂರು: ಸುಶಿಕ್ಷಿತ ಯುವಜನರೇ ಜಾತಿವಾದ, ಕೋಮುವಾದದ ಪೋಷಕರಾಗಿದ್ದಾರೆ. ಈ ಮೂಲಕ ದೇಶವನ್ನು ಅಪಾಯಕ್ಕೆ ದೂಡುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸುಶಿಕ್ಷಿತರು ಹೆಚ್ಚಾದಷ್ಟು ಪ್ರಜಾಪ್ರಭುತ್ವ ಗಟ್ಟಿಯಾಗಬೇಕಿತ್ತು. ಆದರೆ, ಶಿಕ್ಷಿತ ಯುವಜನರೇ ಇಂದು ಜಾತಿವಾದ, ಮತ್ತು ಕೋಮುವಾದದ ಪೋಷಕರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿ ಯುವ ಜನರನ್ನು ಜಾಗೃತಗೊಳಿಸುವ ಹೊಣೆಗಾರಿಕೆ ವಿದ್ಯಾರ್ಥಿ ಕಾಂಗ್ರೆಸ್ ಮೇಲಿದೆ ಎಂದಿದ್ದಾರೆ.
PublicNext
01/09/2021 07:41 am