ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶೋತ್ಸವ ಆಗಬೇಕು ಅನ್ನೋದರಲ್ಲಿ ನಾನು ಒಬ್ಬ-ನಳೀನಕುಮಾರ್ ಕಟೀಲ್...!

ಹುಬ್ಬಳ್ಳಿ: ನಾವು ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದೇವೆ. ಹು-ಧಾ, ಬೆಳಗಾವಿ, ಕಲಬುರಗಿಯಲ್ಲಿ ನಮ್ಮ ಗೆಲವು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಬಂಡಾಯ ಎದ್ದಿರುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಪಕ್ಷ ವಿರೋಧಿ ಕೆಲಸ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 60 ಕ್ಕೂ ಹೆಚ್ಚು ಸೀಟ್ ಗಳನ್ನ ನಾವು ಇಲ್ಲಿ ಗೆಲ್ಲಲಿದ್ದೇವೆ. ಕೇಂದ್ರ, ರಾಜ್ಯ ಮತ್ತು ಪಾಲಿಕೆಯಲ್ಲೂ ನಾವೇ ಅಧಿಕಾರಕ್ಕೆ ಬರ್ತೀವಿ.

ಇನ್ನು 5 ವರ್ಷದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಸಿದ್ದರಾಮಣ್ಣ ಸರ್ಕಾರ ಇದ್ದಾಗ ಎರಡು ವರ್ಷ ಹಣ ಪೆಂಡಿಂಗ್ ಇತ್ತು. ಅಭಿವೃದ್ಧಿ ಕಾರ್ಯಗಳು ಈಗ ಆರಂಭವಾಗಿವೆ. ರಸ್ತೆಗಳ ಕಾಮಗಾರಿ ಈಗ ಆರಂಭ ಆಗಿದೆ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಪೆಂಡಿಂಗ್ ಇಟ್ಟಿದ್ರು. ಆದರೆ ಈ ಬಾರಿ ಎಲ್ಲವೂ ಕ್ಲಿಯರ್ ಆಗಿದೆ, ರಸ್ತೆಗಳ ನಿರ್ಮಾಣ ಕಾಮಗಾರಿ ಆಗುತ್ತೆ ಎಂದರು.

ಗಣೇಶೋತ್ಸವ ಆಗಬೇಕು ಅನ್ನಬೇಕು ಅನ್ನೋದರಲ್ಲಿ ನಾನು ಒಬ್ಬ...

ಸಾರ್ವಜನಿಕ ಗಣೇಶೋತ್ಸವ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನಮ್ಮ ಪರಂಪರೆ ಜೊತೆ ಜನರ ಪ್ರಾಣವೂ ಅಷ್ಟೇ ಮುಖ್ಯ. ಸರ್ಕಾರ ಈಗ ತಜ್ಞರ ಅಭಿಪ್ರಾಯ ಪಡೆಯುತ್ತಿದೆ. ಅವರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

Edited By : Nagesh Gaonkar
PublicNext

PublicNext

31/08/2021 07:38 pm

Cinque Terre

73.54 K

Cinque Terre

7

ಸಂಬಂಧಿತ ಸುದ್ದಿ