ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ, ಶಿವಮೊಗ್ಗಕ್ಕೆ ಯಾಕೆ 2 ಮಂತ್ರಿಗಿರಿ?- ನಮ್ಮವರು ವೋಟ್ ಕೊಟ್ಟಿಲ್ವಾ: ಯತ್ನಾಳ್ ಕಿಡಿ

ವಿಜಯಪುರ: ಬಾಗಲಕೋಟೆ ಮತ್ತು ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನ ನೀಡಿರುವುದು ಯಾಕೆ? ಕಲಬುರಗಿ, ಚಾಮರಾಜನಗರ ಮತ್ತು ಮೈಸೂರಿನವರು ಮತ ನೀಡಿಲ್ವಾ? ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷದ ವಿರುದ್ಧವೇ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಸಿಂದಗಿ ಉಪಚುನಾವಣೆಗೂ ಮೊದಲೇ ಸಚಿವ ಸ್ಥಾನ ನೀಡುವ ಕುರಿತು ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲ ಜಿಲ್ಲೆಗೆ ಒಂದೊಂದು ಸಚಿವ ಸ್ಥಾನ ನೀಡಬೇಕು. ಕೆಲವರಿಗೆ ಯತ್ನಾಳ್ ಸಚಿವ ಆಗಬಾರದು ಅನ್ನೋದಿದೆ. ಹಣೆ ಬರಹದಲ್ಲಿದ್ದರೆ ಯಾರಿಂದಲೂ ತಪ್ಪಿಸಲು ಆಗಲ್ಲ. ಈ ಬಾರಿ ವಿಜಯಪುರಕ್ಕೆ ಅನ್ಯಾಯ ಆಗಲ್ಲ. ನಮ್ಮ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ನಂಬಿಕೆ ಇದೆ" ಎಂದರು.

Edited By : Vijay Kumar
PublicNext

PublicNext

31/08/2021 04:01 pm

Cinque Terre

43.15 K

Cinque Terre

1