ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುವರ್ಣ ಸೌಧದಲ್ಲಿ ನಡೆದ 80 ದಿನಗಳ ಅಧಿವೇಶನಕ್ಕೆ 98.80 ಕೋಟಿ ಖರ್ಚು…

ಬೆಳಗಾವಿ: 2006 ರಿಂದ 2018 ರವರೆಗೆ ಸುವರ್ಣ ಸೌಧದಲ್ಲಿ 80 ದಿನಗಳು ಅಧಿವೇಶನ ನಡೆದಿದೆ. ಈ ಅಧಿವೇಶನಕ್ಕೆ ತಗುಲಿರುವ ಖರ್ಚಿನ ಬಗ್ಗೆ ಕೇಳಿದ್ರೆ ನೀವು ದಂಗಾಗುವುದು ಗ್ಯಾರಂಟಿ. ಹೌದು ವಿಧಾನಸೌಧದಲ್ಲಿ 9 ಬಾರಿ ನಡೆದಿರುವ ವಿಧಾನಮಂಡಲ ಅಧಿವೇಶನಕ್ಕೆ ಬರೋಬ್ಬರಿ 98.80 ಕೋಟಿ ಖರ್ಚಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದಿರುವ ಈ ಮಾಹಿತಿಯನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಧ್ಯಮಕ್ಕೆ ಭಾನುವಾರ ಬಿಡುಗಡೆ ಮಾಡಿದ್ದಾರೆ. ದಿನವೊಂದಕ್ಕೆ ಸರಾಸರಿ 1.20 ಕೋಟಿ ವೆಚ್ಚ ಮಾಡಿರುವುದು ಸರ್ಕಾರದಿಂದ ಒದಗಿಸಿರುವ ದಾಖಲೆಗಳಿಂದ ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸುವರ್ಣ ವಿಧಾನಸೌಧದ ಉದ್ಘಾಟನೆ ಕಾರ್ಯಕ್ರಮಕ್ಕೆ 8 ಕೋಟಿ ವೆಚ್ಚ ಮಾಡಲಾಗಿದೆ. ಪ್ರವಾಸಿಮಂದಿರದಲ್ಲಿ ರಾಷ್ಟ್ರಪತಿ ಅವರಿಗೆ ಆಸನಕ್ಕಾಗಿ 36 ಲಕ್ಷ ವೆಚ್ಚ ವ್ಯಯಿಸಲಾಗಿದೆ. ಆಗ ಪ್ರವಾಸಿಮಂದಿರದ ಉದ್ಯಾನ ಅಭಿವೃದ್ಧಿಪಡಿಸಲು 31 ಲಕ್ಷ ಖರ್ಚು ಮಾಡಲಾಗಿದೆ.

ಅಧಿವೇಶನದಲ್ಲಿ ಪಾಲ್ಗೊಳ್ಳುವ ಪ್ರತಿ ಶಾಸಕರಿಗೆ 2ಸಾವಿರ ದಿನ ಭತ್ಯೆ, ಅವರ ಕ್ಷೇತ್ರಗಳಿಂದ ಇಲ್ಲಿಗೆ ಬರುವುದಕ್ಕಾಗಿ ಪ್ರತಿ ಕಿ.ಮೀ.ಗೆ 25 ಪ್ರಯಾಣ ಭತ್ಯೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಸುವರ್ಣ ವಿಧಾನಸೌಧಕ್ಕೆ ಬರಲು ಸಾರಿಗೆ ಭತ್ಯೆಯಾಗಿ ನಿತ್ಯ 5ಸಾವಿರ ಮತ್ತು ನಗರದಲ್ಲಿ ತಂಗಿದ್ದವರಿಗೆ ಸೌಧ ತಲುಪಲು ದಿನವೊಂದಕ್ಕೆ 2,500 ಭತ್ಯೆ ಕೊಡಲಾಗಿದೆ.

2017ರ ಅಧಿವೇಶನದ ವೇಳೆ ಪ್ರವಾಸಿಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ, ನಾಲ್ವರು ಸಚಿವರು ಹಾಗೂ ಸಿಬ್ಬಂದಿಯ ಊಟ-ಉಪಾಹಾರಕ್ಕಾಗಿ 24 ಲಕ್ಷ . ಸುವರ್ಣ ವಿಧಾನಸೌಧದ ಉದ್ಯಾನ ನಿರ್ವಹಣೆ, ಸಿವಿಲ್ ಕಾಮಗಾರಿ ಹಾಗೂ ವಿದ್ಯುತ್ ಬಿಲ್ ಗಾಗಿ 2017ರ ಏಪ್ರಿಲ್ ವರೆಗೆ 8 ಕೋಟಿ ವೆಚ್ಚವಾಗಿದೆ. ಇದೇ ಅವಧಿಯಲ್ಲಿ ಕಟ್ಟಡದ ಪಾಚಿ ತೊಳೆಯಲು 24 ಲಕ್ಷ ಖರ್ಚಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಒಟ್ಟು 80 ದಿನಗಳ ಅಧಿವೇಶನಕ್ಕೆ 98.80 ಕೋಟಿ ಖರ್ಚು ಆಗಿರುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

29/08/2021 05:21 pm

Cinque Terre

54.07 K

Cinque Terre

12

ಸಂಬಂಧಿತ ಸುದ್ದಿ