ಬೆಂಗಳೂರು : ಇಂದಿರಾ ಕ್ಯಾಟೀನ್ ಹೆಸರು ಬದಲಾವಣೆ, ನೆಹರೂ ಹುಕ್ಕಾಬಾರ್ , ಕಾಂಗ್ರೆಸ್ ನಲ್ಲಿ ಪ್ರಮೋಷನ್ ಸಿಗಬೇಕು ಎಂದರೆ ಜೈಲಿಗೆ ಹೋಗಬೇಕು ಎನ್ನುವ ಹೇಳಿಕೆಗಳಿಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸದ್ಯ ಸಿಟಿ ರವಿಗೆ ಬ್ರಿಜೇಶ್ ಕಾಳಪ್ಪ ತಿರುಗೇಟು ಕೊಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ, ಸಿಟಿ ರವಿ ತೆಲೆಯಲ್ಲಿ ಬುದ್ದಿ ಇಟ್ಟುಕೊಂಡು ಮಾತನಾಡಬೇಕು.
ಅಮೀತ್ ಶಾ, ಯಡಿಯೂರಪ್ಪ, ಅಶೋಕ್, ಹಾಲಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಇವೆರೆಲ್ಲ ಜೈಲಿಗೆ ಹೋಗಿದ್ದರು. ಯಡಿಯೂರಪ್ಪ ಅರ್ಧ ಸಂಪುಟ ಜೈಲಿನಲ್ಲಿ ಇತ್ತು. ಇದನ್ನು ತಿಳಿದುಕೊಂಡು ಮಾತನಾಡಿ ಎಂದು ತಿರುಗೇಟು ನೀಡಿದರು.
ಸಚಿವ ಆರ್.ಅಶೋಕ್ ಮೇಲೆ ಡಿನೊಟಿಫೈ ಆರೋಪ ಇಲ್ವೇ? ಹರತಾಳು ಹಾಲಪ್ಪ ಜೈಲಿಗೆ ಹೋಗಿರಲಿಲ್ವೇ? ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದವರಲ್ವೇ? ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋಗಿದ್ದವರಲ್ಲವೇ? ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಜೈಲಿನಲ್ಲಿತ್ತು, ಸಿ.ಟಿ.ರವಿಯವರಿಗೆ ಇದು ಗೊತ್ತಿಲ್ಲವೇ? ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಲೂಟಿ ರವಿ ಅಂತಾರೆ. ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಆಸ್ತಿಯ ಮಾಲೀಕ. ಸಿ.ಟಿ.ರವಿ ಇಷ್ಟು ದೊಡ್ಡ ಸಾಹುಕಾರ ಆಗಿದ್ದು ಹೇಗೆ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.
ಮಾತನಾಡುವಾಗ ಎಚ್ಚರ ಇರಲಿ. ನೆಹರು, ಇಂದೀರಾಗೆ ನಿಮ್ಮ ತಂದೆ ಕೂಡ ವೋಟ್ ಹಾಕಿದ್ದಾರೆ. ಹಾಗಾಗಿ ಗೌರವದಿಂದ ನಡೆದುಕೊಳ್ಳುವಂತೆ ಸಿಟಿ ರವಿಗೆ ಕಾಳಪ್ಪ ತಾಕೀತು ಮಾಡಿದರು.
PublicNext
25/08/2021 09:06 pm