ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಪಾಳಮೋಕ್ಷ ಮಾಡುವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಬಂಧಿಸಲು ನಾಶಿಕ್ ಪೊಲೀಸರ ತಂಡ ಮುಂದಾಗಿದೆ.
ವಿವಾದಾತ್ಮಕ ಹೇಳಿಕೆ ನೀಡಿರುವ ನಾರಾಯಣ ರಾಣೆ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶಿವ ಸೇವೆಯ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದೆ. ದಕ್ಷಿಣ ಮುಂಬೈನ ಒಪೆರಾ ಹೌಸ್ ಕ್ರಾಸಿಂಗ್ನಲ್ಲಿ ಶಿವಸೇನಾ ಕಾರ್ಯಕರ್ತರು ರಾಣೆ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಸದ್ಯ ಕೇಂದ್ರ ಸಚಿವ ನಾರಾಯಣ ರಾಣೆ ಅವರು ಜನಾಶೀರ್ವಾದ ಕೊಂಕಣ ವಲಯದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಅವರ ವಿರುದ್ಧ ಅನೇಕ ಎಫ್ಐಆರ್ ದಾಖಲಾದ ಹಿನ್ನೆಲೆಯನ್ನು ಅವರನ್ನು ಬಂಧಿಸಲು ನಾಶಿಕ್ ಪೊಲೀಸರು ಅವರಿರುವ ಕಡೆ ತೆರಳುತ್ತಿದ್ದಾರೆ.
ನಾರಾಯಣ ರಾಣೆ ಹೇಳಿದ್ದೇನು?:
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ನಾರಾಯಣ ರಾಣೆ ಅವರು ಸಿಎಂ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಕೋಪದಲ್ಲಿ ನಾರಾಯಣ ರಾಣೆ, "ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರ ಭಾಷಣದ ಸಮಯದಲ್ಲಿ ಅವರು ಸ್ವಾತಂತ್ರ್ಯದ ವರ್ಷಗಳ ಲೆಕ್ಕವನ್ನು ಕೇಳಬೇಕಿತ್ತು ಮತ್ತು ನಾನು ಅಲ್ಲಿದ್ದರೆ, ನಾನು ಅವರಿಗೆ ಒಂದು ಬಿಡ್ತಿದ್ದೆ ಎಂದು ಹೇಳಿದ್ದರು.
PublicNext
24/08/2021 03:14 pm