ಮಂಗಳೂರು: ಬ್ರಿಟಿಷರು ಕೊಟ್ಟಿರುವ ಭತ್ತೆ ಹಣವನ್ನು ಪಡೆದ, ಅವರಿಗೆ ಕ್ಷಮೆ ಪತ್ರ ಬರೆದಿರುವ ಸಾವರ್ಕರ್ ಯಾವ ರೀತಿ ವೀರರಾಗಲು ಸಾಧ್ಯ ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು.
ಸಾವರ್ಕರ್ ಯಾವುದೇ ರೀತಿಯ ಸ್ವಾತಂತ್ರ್ಯ ಹೋರಾಟಗಾರರಲ್ಲ. ಅವರು ಬ್ರಿಟಿಷರ ಹಣ ತಿಂದು, ಅವರ ಚಾಪ್ಲೋಸಿ ಮಾಡಿದಂತವರು. ಇದು ದೇಶಕ್ಕೆ ಗೊತ್ತಿರುವಂಥದ್ದು, ಬಿಜೆಪಿಗರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಇವರು ಎಷ್ಟೇ ತಿರುಚಿದರೂ ಜನರು ಸರಿಯಾದ ಸಮಯದಲ್ಲಿ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಆರ್ ಎಸ್ಎಸ್ ಹಾಗೂ ಬಿಜೆಪಿಯಿಂದ ಯಾರಾದರೂ ದೇಶಕ್ಕಾಗಿ ಹೋರಾಟ ಮಾಡಿ ಸತ್ತವರು ಇಲ್ಲ. ಬಿಜೆಪಿಯವರ ಕಾರ್ಯಕರ್ತರು ಬಿಡಿ ಅವರ ಮನೆ ನಾಯಿ ಕೂಡಾ ಈ ದೇಶಕ್ಕೋಸ್ಕರ ಸತ್ತಿಲ್ಲ. ಮೊದಲು ಇವರು ಇತಿಹಾಸ ಓದಿಕೊಳ್ಳಲಿ. ಇತಿಹಾಸ ಗೊತ್ತಿಲ್ಲದೆ ಮಾತನಾಡಬಾರದು. ದೆಹಲಿಯಲ್ಲಿರುವವರನ್ನು ಮೆಚ್ಚಿಸಿ ಮಂತ್ರಿಗಿರಿ, ಸಿಎಂ ಆಗಲು ಬೇಕಾಬಿಟ್ಟಿ ಹೇಳಿಕೆಯನ್ನು ಹೇಳುವುದನ್ನು ಬಿಟ್ಟು ರಾಜ್ಯದ ಯುವಕರಿಗೆ ಉದ್ಯೋಗ ಕೊಡಿಸುವ, ರೈತರ ಸಮಸ್ಯೆ ಬಗೆಹರಿಸುವ, ಬೆಲೆಯೇರಿಕೆ ಕಡಿಮೆ ಮಾಡುವ, ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಲಿ ಎಂದು ಬಿ.ವಿ.ಶ್ರೀನಿವಾಸ್ ಹೇಳಿದರು.
PublicNext
23/08/2021 05:23 pm