ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೆಡಿಎಸ್ ಬಗ್ಗೆಯೇ ಕುಮಾರಸ್ವಾಮಿ ಹೊಸ ಬಾಂಬ್: ಕಾರ್ಯಕರ್ತರೇ ಸರಿಯಿಲ್ಲ...!

ಹುಬ್ಬಳ್ಳಿ: ಜಾತ್ಯಾತೀತ ಜನತಾದಳದಲ್ಲಿ ಕಾರ್ಯಕರ್ತರು ಸರಿಯಲ್ಲ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಪಕ್ಷದ ಬಗ್ಗೆಯೇ ಹೊಸ ಬಾಂಬ್ ಸಿಡಿಸಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ. ಕಾರ್ಯಕರ್ತರಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ನಾನು ಬೆಂಗಳೂರಿಗೆ ಹೋಗುತ್ತಿದ್ದಂತೆ , ಮನೆಗೆ ಹೋಗಿ ಮಲಗುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕಾರ್ಯಕರ್ತರು ಸರಿಯಲ್ಲ ಹೀಗಾಗಿ ನಮ್ಮ‌ ಪಕ್ಷ. ಉತ್ತರ ಕರ್ನಾಟಕದಲ್ಲಿ ಸಂಘಟನೆ ಆಗುತ್ತಿಲ್ಲ. ಯಾರು ಪಕ್ಷ ಬಗ್ಗೆ ಸಿರಿಯಸ್‌ ಆಗಿ ಕೆಲಸ‌ ಮಾಡ್ತಾರೆ ಅವರಿಗೆ ಮಣೆ ಹಾಕುತ್ತೇವೆ ಎಂದರು.

ಜನತಾ ಪರಿವಾರದ ಹಳಬರನ್ನು ಒಟ್ಟುಗೂಡಿಸುವ ಆಸಕ್ತಿ ಇಲ್ಲ. ಹೊಸಬರಿಂದಲೇ ಪಕ್ಷ ಕಟ್ಟುತ್ತೇನೆ.ನನಗೆ ಮಮತಾ ಬ್ಯಾನರ್ಜಿಯವರೇ ಸ್ಪೂರ್ತಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

Edited By : Manjunath H D
PublicNext

PublicNext

23/08/2021 11:54 am

Cinque Terre

75.25 K

Cinque Terre

17

ಸಂಬಂಧಿತ ಸುದ್ದಿ