ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಎಷ್ಟು ದಿನ ಸುಳ್ಳು ಹೇಳ್ತೀರಾ ಮಿಸ್ಟರ್ ಪ್ರತಾಪ್ ಸಿಂಹ.?': ವಿಶ್ವನಾಥ್ ಕಿಡಿ

ಮೈಸೂರು: ಸುಮ್ನೆ ಎಷ್ಟು ದಿನ ನೀವು ಸುಳ್ಳು ಹೇಳುತ್ತಿರಾ ಎಂದು ಮಾಜಿ ಸಚಿವ ಹೆಚ್​.ವಿಶ್ವನಾಥ್ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು-ಮೈಸೂರು ದಶ ಪಥದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮೋದಿ ಸರ್ಕಾರದ ಯೋಜನೆ ಅಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಹೆಚ್​.ವಿಶ್ವನಾಥ್ ಗುಡುಗಿದ್ದಾರೆ. ಈ ಸಂಬಂಧ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಪ್ರತಾಪ್ ಸಿಂಹ ಹೇಳಿರೋದು ಸರಿಯಲ್ಲ. ಮೊದಲು ನೀವು ಏನು ಮಾಡಿದ್ದೀರ ಅದನ್ನ ಜನರಿಗೆ ಹೇಳಿ. ಮೈಸೂರಿಂದ-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಮಂಗಳೂರು ಹೆದ್ದಾರಿ ಯೋಜನೆಗಳು ಆಗಿನ ಕಾಲದಲ್ಲೇ ನಡೆದಿರುವ ಕೆಲಸ. ಅನಾವಶ್ಯಕವಾಗಿ ಯಾರೂ ಕ್ರೆಡಿಟ್ ತೆಗೆದುಕೊಳ್ಳಬಾರದು" ಎಂದು ತಿಳಿಸಿದ್ದಾರೆ.

ಕೆಲವು ರಾಜಕಾರಣಿಗಳು ಕೆಲಸ ಮಾಡೋದನ್ನ ಬಿಟ್ಟು ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಕೆಲಸ ಮಾಡಿ ರಾಜಕಾರಣಿಗಳು ಕ್ರೆಡಿಟ್ ತೆಗೆದುಕೊಳ್ಳಬೇಕು. ಬೆಂಗಳೂರು-ಮೈಸೂರು ದಶಪಥ ಪ್ರಧಾನಿ ಮೋದಿ ಕಾಲದಲ್ಲಿ ಆಗಿರುವುದಲ್ಲ. 2012ರಲ್ಲಿ ಆಸ್ಕರ್ ಫರ್ನಾಂಡಿಸ್ ಮಂತ್ರಿಯಾಗಿದ್ದಾಗ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಈ ವೇಳೆ 1,882 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ತೀರ್ಮಾನಿಸಲಾಗಿತ್ತು. ಅಂದಿನ ಸಭೆಯಲ್ಲಿ ನಾನು, ಧ್ರುವನಾರಾಯಣ್, ರಮ್ಯಾ, ಡಿ.ಕೆ. ಸುರೇಶ್ ಕೂಡ ಇದ್ದೇವು. ಈ ರಸ್ತೆ ಸಂಬಂಧ 8ರಿಂದ 10 ಮೀಟಿಂಗ್​ಗಳು ನಡೆದವು. ನಂತರದ ದಿನಗಳಲ್ಲಿ ಯುಪಿಎ ಸರ್ಕಾರ ಬದಲಾಯಿತು, ಅಲ್ಲದೇ ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆಗ ಮಹಾದೇವಪ್ಪ ಪಿಡಬ್ಲ್ಯೂಡಿ ಸಚಿವರಾದಾಗ ಈ ಯೋಜನೆ ಜಾರಿಗೆ ಬರುವಲ್ಲಿ ಯಶಸ್ವಿಯಾಯಿತು" ಎಂದು ಮಾಹಿತಿ ನೀಡಿದರು.

Edited By : Vijay Kumar
PublicNext

PublicNext

22/08/2021 03:29 pm

Cinque Terre

34.73 K

Cinque Terre

4

ಸಂಬಂಧಿತ ಸುದ್ದಿ