ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಸುವರ್ಣ ಸೌಧದಲ್ಲಿ ಶನಿವಾರ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಆಯುಕ್ತಾಲಯ ಬೆಳಗಾವಿಗೆ ಶಿಫ್ಟ್ ಮಾಡಲು ಕೂಡಲೇ ಆದೇಶ ಮಾಡುತ್ತೇನೆ. ಹಾಗೂ ಕೆಲವು ಮಹತ್ವದ ಇಲಾಖೆಗಳು ಸುವರ್ಣ ಸೌಧದಿಂದಲೇ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳುತ್ತೇನೆ,” “ಸುವರ್ಣ ವಿಧಾನ ಸೌಧವನ್ನು ಆಡಳಿತ ಶಕ್ತಿ ಕೇಂದ್ರ ಮಾಡುವ ಇಚ್ಛೆ ಇದೆ ಎಂದಿದ್ದಾರೆ.
PublicNext
22/08/2021 07:14 am