ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ವಿವಾದಕ್ಕೆ ಗುರಿಯಾಗಿದ್ದಾರೆ. ರಾವ್ ಸಾಹೇಬ್ ದಾನ್ವೆ ಅವರು ರಾಹುಲ್ ಗಾಂಧಿ ಅವರನ್ನು ದೇವರಿಗೆ ಮೀಸಲಿಟ್ಟ ಬೀದಿ ಬಸವನಿಗೆ ಹೋಲಿಸಿದ್ದಾರೆ.
ಕೇಂದ್ರ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್ ಕರಡ್ ಅವರು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಕೈಗೊಂಡ 'ಜನ್ ಆಶೀರ್ವಾದ ಯಾತ್ರೆ'ಯ ಭಾಗವಾಗಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ ಈ ಮಾತು ಆಡಿದ್ದಾರೆ.
ಮರಾಠಿಯಲ್ಲಿ ಭಾಷಣ ಮಾಡಿದ ದಾನ್ವೆ, "ಮಹಾರಾಷ್ಟ್ರದ ಕೆಲವೆಡೆ ಕೆಲವು ಎತ್ತುಗಳನ್ನು ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಈ ಎತ್ತುಗಳನ್ನು ಕೃಷಿಗಾಗಲಿ, ಸಾರಿಗೆಗಾಗಲಿ ಬಳಸುವುದಿಲ್ಲ. ಇಂಥ ಬಸವನ ರೀತಿ ರಾಹುಲ್ ಗಾಂಧಿ ಎಂದು ರಾವ್ಸಾಹೇಬ್ ಹೇಳಿದ್ದಾರೆ. ರೈಲ್ವೇ ಖಾತೆ ರಾಜ್ಯ ಸಚಿವರಾಗಿರುವ ರಾವ್ಸಾಹೇಬ್ ಮುಂದುವರೆದು ಇಂಥ ಬಸವಗಳು ಜಮೀನಿಗೆ ನುಗ್ಗಿ ಬೆಳೆಯನ್ನು ತಿಂದರೂ ಸಹ ರೈತರು ಆ ಪ್ರಾಣಿಯನ್ನು ಕ್ಷಮಿಸಿಬಿಡುತ್ತಾರೆ" ಎಂದು ಹೇಳಿದ್ದಾರೆ.
ಕೇಂದ್ರ ಸಚಿವರ "ಅಸಭ್ಯ ಮತ್ತು ಆಘಾತಕಾರಿ" ಟೀಕೆಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಅವರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ.
PublicNext
21/08/2021 08:23 pm