ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಲಂ ಬೋರ್ಡ್ ಅಧಿಕಾರಿ ನೀರಿಳಿಸಿದ್ದೇಗೆ ಗೊತ್ತಾ ವಸತಿ ಸಚಿವ ಸೋಮಣ್ಣ...?

ದಾವಣಗೆರೆ: ಕೊಳಚೆ ನಿರ್ಮೂಲನಾ‌ ಮಂಡಳಿಯ ಅಧಿಕಾರಿ ಕಪಿಲ ಗೌಡರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಸತಿ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗೆ ನೀರಿಳಿಸಿದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಡೆಯುತು.

ವಸತಿ ಇಲಾಖೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಅಧಿಕಾರಿಯ ಇನೋವಾ ಕಾರಿಗೆ ಜಿಪಿಎಸ್ ಅಳವಡಿಸಿ ಎಂದು ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಲಂ ಬೋರ್ಡ್ ನ ಅಧಿಕಾರಿಯಾಗಿ ಹೊಟ್ಟೆ ಬರಿಸಿಕೊಂಡರೆ ಸಾಲದು. ಬಡವರ ಕೆಲಸ ಮಾಡಿಕೊಡ್ರಪ್ಪಾ.‌ ಕೊಳಚೆಯಲ್ಲಿಯೇ ಜನರು ವಾಸ ಮಾಡ್ತಿದ್ದಾರೆ. ಅವ್ರಿಗೆಲ್ಲಾ ಮನೆ ಕಟ್ಟಿಕೊಡ್ರಿ‌. ಆರು ವಿಧಾನಸಭಾ ಕ್ಷೇತ್ರಗಳಿಗೆ ಯಾವಾಗಾದರೂ ಹೋಗಿದ್ದೀರಾ. ಕೊರೊನಾ ಬಂದು ಎಂತೆಂತವರೋ ಹೋದ್ರು. ಬುದ್ದಿವಂತರು ನೀವು ಉಳಿದುಕೊಂಡಿದ್ದೀರಾ. ಪುಣ್ಯ ಮಾಡಿದ್ದೀರಾ. ಈಗಲಾದರೂ ಜನರ ಪರ ಕೆಲಸ ಮಾಡ್ರಿ ಎಂದು ತರಾಟೆಗೆ ತೆಗೆದುಕೊಂಡರು.

ನಿಂದೇನು ಕೆಲಸ. ನಿನಗೆ ಗೂಟದ ಕಾರು, ಎಲ್ಲಾ ವ್ಯವಸ್ಥೆ ಬೇಕು. ಇನೋವಾ ಕಾರು ಕೊಟ್ಟಿರೋದು ಅಲ್ವಾ. ಐಎಎಸ್ ಅಧಿಕಾರಿ ಕೊಡುವ ಕಾರು ಅದು.‌ ನಾನೇ ಹರಿಹರಕ್ಕೆ ಹೋದಾಗ ಬರೋಕೆಈತ ತಯಾರಿರಲಿಲ್ಲ. ನಾನೇ ಮೈಸೂರಿನಿಂದ ದಾವಣಗೆರೆಗೆ ವರ್ಗಾ ಮಾಡಿದ್ದೆ ಎಂದು ಮನಸ್ಸೋ ಇಚ್ಚೆ ಸೋಮಣ್ಣ ಬೈದರು.

Edited By : Nagesh Gaonkar
PublicNext

PublicNext

21/08/2021 07:26 pm

Cinque Terre

70.85 K

Cinque Terre

1

ಸಂಬಂಧಿತ ಸುದ್ದಿ