ಧಾರವಾಡ: ಸಚಿವ ಆನಂದ ಸಿಂಗ್ ಅವರ ವಿಚಾರದಲ್ಲಿ ಏನೂ ಗೊಂದಲ ಇಲ್ಲ. ಅವರು ಬೇರೆ ಖಾತೆ ಬೇಕು ಅಂತಾ ಕೇಳಿದ್ದಾರೆ. ಸರ್ಕಾರ ಆನಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ ಸಿಂಗ್ ಅವರು ಸಹನೆ, ಸಮಾಧಾನ ಇರುವ ವ್ಯಕ್ತಿ. ಅವರು ತಮ್ಮ ಭಾವನೆಗಳನ್ನು ನಾಲ್ಕು ಗೋಡೆಗಳ ಮಧ್ಯೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಅವರೊಂದಿಗೆ ಮಾತನಾಡಿದ್ದಾರೆ ಎಂದರು.
ಆನಂದ ಸಿಂಗ್ ಅವರು ಕರ್ತವ್ಯ ನಿಷ್ಠೆ ಇರುವ ಸ್ನೇಹಿತರು. ಅವರನ್ನು ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂದರು.
PublicNext
21/08/2021 03:45 pm