ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಜೈಲಿನಿಂದ ವಿನಯ್ ಕುಲಕರ್ಣಿ ರಿಲೀಸ್..

ಬೆಳಗಾವಿ : 9 ತಿಂಗಳ ಸೆರೆವಾಸದಿಂದ ಬೆಲ್ ಮೇಲೆ ಹೊರ ಬಂದ ವಿನಯ ಕುಲಕರ್ಣಿ ಅವರನ್ನು ಅಭಿಮಾನಿಗಳ ಸಿಹಿ ತಿನಿಸಿ ಸೇಬಿನ ಹಾರಹಾಕಿ ಬರಮಾಡಿಕೊಂಡಿದ್ದಾರೆ. ಇನ್ನು ಜೈಲಿನಿಂದ ಹೊರಬರುತ್ತಿದ್ದಂತೆ ವಿನಯ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳಿದ್ದಾರೆ. ಸದ್ಯ ಜಾಮೀನು ಮೇಲೆ ಹೊರಬಂದಿದ್ದೇನೆ ಸದ್ಯದರಲ್ಲಿಯೇ ನಿರಪರಾಧಿಯಾಗಿ ಹೊರಬರುತ್ತೇನೆ ಎಂದಿದ್ದಾರೆ.

ಇನ್ನು ಮುಂದೆ ನಾನು ಬೇರೆಯದೇ ರೀತಿಯ ರಾಜಕಾರಣಿಯಾಗುತ್ತೇನೆ ಎಂದರು.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ ಜೈಲು ಪಾಲಾಗಿದ್ದರು. ಹಿಂಡಲಗಾ ಜೈಲಿನ ಹೊರಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು, ಕುಟುಂಬಸ್ಥರು ಅವರನ್ನು ಸ್ವಾಗತಿಸಿದರು. ಹೆಣ್ಣುಮಕ್ಕಳು ಪೂರ್ಣಕುಂಭ ಸ್ವಾಗತ ಮಾಡಿದರು.

ಸಾವಿರಾರು ಕಾರ್ಯಕರ್ತರ ನೂಕುನುಗ್ಗಲು ತಪ್ಪಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ನೆಚ್ಚಿನ ನಾಯಕನ ಬರಮಾಡಿಕೊಳ್ಳುವ ಭರಾಟೆಯಲ್ಲಿ ಕೋವಿಡ್ ನಿಯಮವನ್ನು ಗಾಳಿಗೆ ತೂರಲಾಗಿದೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಂತೂ ಇಲ್ವೇಇಲ್ಲಾ.. ಜೈಲು ಆವರಣದಲ್ಲಿ ಜನಜಾತ್ರಯೇ ನೆರೆದಿದೆ.

Edited By : Nirmala Aralikatti
PublicNext

PublicNext

21/08/2021 11:43 am

Cinque Terre

89.68 K

Cinque Terre

25

ಸಂಬಂಧಿತ ಸುದ್ದಿ