ಮಂಡ್ಯ: ನನ್ನ ಆಪ್ತ ಕಾರ್ಯದರ್ಶಿ ನನ್ನ ಹೆಸರಿನಲ್ಲಿ ಸಹಿ ಮಾಡುತ್ತಿಲ್ಲ. ಆಪ್ತ ಕಾರ್ಯದರ್ಶಿ ಎಂದೇ ಅವರು ಸಹಿ ಮಾಡುತ್ತಿದ್ದಾರೆ. ಸುಮ್ಮನೆ ಸಣ್ಣ ವರ್ತನೆ ತೋರಬಾರದು. ನನ್ನ ಹೆದರಿಸಿ ಬೆದರಿಸಿದರೆ ನಾನು ಹೆದರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ದಳಪತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ದಿಶಾ ಸಭೆಗೆ ಜೆಡಿಎಸ್ ಶಾಸಕರು ಯಾಕೆ ಬಂದ್ರು ಅನ್ನೋದು ಎಲ್ಲರಿಗೂ ಗೊತ್ತಿರೊ ವಿಚಾರ. ಏಳು ಸಭೆಗೆ ಬಾರದವರು ಎಂಟನೆ ಸಭೆಗೆ ಬಂದರು. ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಬಹುದಿತ್ತು. ಆದರೆ ಅಕ್ರಮ ಗಣಿಗಾರಿಕೆ ವಿಚಾರ ಸಭೆಯಲ್ಲಿ ಚರ್ಚೆಗೆ ಬಂದಿರುವುದು ಹಾಗೂ ಅದನ್ನು ಸಮರ್ಥಿಸಿಕೊಳ್ಳಲೆಂದೇ ಸಭೆಗೆ ಬಂದಿರುವುದು ಈ ಜಿಲ್ಲೆಯ ದುರಂತ ಎಂದು ಹೇಳಿದ್ದಾರೆ.
ನನ್ನ ಸಿಬ್ಬಂದಿ ಅಂದ್ಮೇಲೆ ಇದು ಅಧಿಕೃತವೇ, ಗೌಪ್ಯ ಸಭೆ ಅಲ್ಲ. ಸಭೆಯನ್ನು ಇಡೀ ಪ್ರಪಂಚವೇ ನೋಡಿದೆ. ಅವರು ಬಂದಿದ್ದೇ ಸಭೆ ನಡೆಸಬಾರದೆಂಬ ಉದ್ದೇಶದಿಂದ. ಅವರು ಸಭೆಗೆ ಬರುತ್ತಾರೆ ಅನ್ನುವಾಗಲೇ ನನಗೆ ಗೊತ್ತಿತ್ತು. ಇವರು ಇದೇ ಉದ್ದೇಶಕ್ಕಾಗಿ ಬರುತ್ತಿದ್ದಾರೆ ಅನ್ನುವುದು. ಕೋವಿಡ್ ವೇಳೆಯೂ ಸಭೆಗೆ ಬರದವರು ಇಂದು ಬಂದಿದ್ದರು ಎಂದು ಮಾಹಿತಿ ನೀಡಿದರು.
PublicNext
18/08/2021 11:04 pm