ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರನ್ನ ದಲ್ಲಾಳಿಗಳೆಂದ ಅಧಿಕಪ್ರಸಂಗಿ, ಕೂಗುಮಾರಿ ಕೇಂದ್ರ ಸಚಿವೆಯ ವಿರುದ್ಧ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು 'ದಲ್ಲಾಳಿಗಳು', 'ಮಧ್ಯವರ್ತಿಗಳು' ಎಂದು ಅವಮಾನಿಸಿರುವ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಖಂಡನೀಯ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, "ಶೋಭ ಕರಂದ್ಲಾಜೆ ಅವರು ತಕ್ಷಣ ತಮ್ಮ ಹೇಳಿಕೆಯನ್ನು ವಾಪಸು ಪಡೆದು, ರೈತರ ಕ್ಷಮೆ ಯಾಚಿಸಬೇಕು. ಅವರ ಹೇಳಿಕೆ ಕೇಂದ್ರ ಬಿಜೆಪಿ ಸರ್ಕಾರದ ಅಧಿಕೃತ ನಿಲುವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಈ ಬಗ್ಗೆ ಸ್ಪಷ್ಟನೆ ನೀಡಿ ಅಧಿಕಪ್ರಸಂಗಿ ಸಚಿವೆಯ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಪ್ರೊ. ಎಂ.ಡಿ. ನಂಜುಂಡ ಸ್ವಾಮಿಯವರಂತಹ ಹಿರಿಯರು ಮುನ್ನಡೆಸಿದ್ದ ಕರ್ನಾಟಕದಲ್ಲಿ ರೈತ ಹೋರಾಟಕ್ಕೆ ಹೆಮ್ಮೆಯ ಪರಂಪರೆ ಇದೆ. ಅದೇನು ಅಧಿಕಾರಕ್ಕಾಗಿ, ಸಚಿವರಾಗಲು ನಡೆಸುವ ದಲ್ಲಾಳಿಗಿರಿ ಹೋರಾಟ ಅಲ್ಲ ಎನ್ನುವುದನ್ನು ಇಂತಹ ಕೂಗುಮಾರಿ ಸಚಿವರು ತಿಳಿದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

Edited By : Vijay Kumar
PublicNext

PublicNext

18/08/2021 04:56 pm

Cinque Terre

39.22 K

Cinque Terre

6