ಬೆಂಗಳೂರು : ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೇಂದ್ರದ ನೂತನ ಸಚಿವ ಎ ನಾರಾಯಣಸ್ವಾಮಿ ಅವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅದ್ದೂರಿ ಸ್ವಾಗತ ಮಾಡಿದ್ದಾರೆ. ಬರೋಬ್ಬರಿ 500 ಕೆಜಿ ಸೇಬಿನ ಹಾರ ಹಾಕುವ ಮೂಲಕ ನೂತನ ಸಚಿವರಿಗೆ ಅಭಿನಂದನೆ ಮಾಡಿದ್ದಾರೆ.
ಇದಾದ ಬಳಿಕ ಸಚಿವರಿಗೆ ಹಾಕಿದ ಸೇಬು ಹಣ್ಣಿನ ಹಾರದ ಗತಿ ಏನಾಯ್ತು ಎನ್ನುವುದನ್ನು ವಿಡಿಯೋದಲ್ಲಿ ಕಾಣಬಹುದು.ಯಾವಾಗಾದ್ರು ಸಚಿವರು ಇಲ್ಲಿಂದ ಹೋಗತ್ತಾರೋ ಎಂದು ಹಸಿವಿನಿಂದ ಕಾಯುತ್ತಿದ್ದ ಅಭಿಮಾನಿಗಳು ಕ್ಷಣಾರ್ಧದಲ್ಲಿ ಅಲ್ಲೊಂದು ಸೇಬು ಹಣ್ಣಿನ ಹಾರವಿತ್ತು ಎನ್ನುದನ್ನೇ ಇಲ್ಲವಾಗಿಸಿದ್ದಾರೆ.
ಯಾರಿಗೆ ಎಷ್ಟು ಹಣ್ಣು ಸಿಗುತ್ತಾವೊ ಅಷ್ಟನ್ನು ಬಾಜಿಕೊಂಡಿದ್ದಾರೆ. ಆದರೂ ಸೇಬು ಹಣ್ಣಿನ ಹಾರವನ್ನು ಹರಿದ ಪರಿ ನಿಜಕ್ಕೂ ಅದ್ಬೂತವೇ ಸರಿ…
PublicNext
16/08/2021 07:15 pm