ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ಮಂತ್ರಿ ಆಗ್ತೀವೋ ಬೀಡ್ತಿವೋ.. ಬಟ್ ನಮ್ಮ‌ ಸ್ನೇಹಿತ ಸಿಎಮ್ ಆಗಿದ್ದಾನೆ ಅಷ್ಟ ಸಾಕು: ರಮೇಶ್ ಜಾರಕಿಹೊಳಿ

ಬೆಳಗಾವಿ (ಅಥಣಿ): ನಾವು ನಮ್ಮ‌ ಸಹೋದರ ಮಿತ್ರ ಮಂಡಳಿ ಮಂತ್ರಿ ಆಗ್ತಿವೋ ಬಿಡ್ತಿವೋ ಅದು ಹೈ ಕಮಾಂಡಗೆ ಬಿಟ್ಟ ವಿಚಾರ ಆದರೆ ನನ್ನ ಸ್ನೆಹೀತ ಸಿಎಮ್ ಆಗಿರುವದು ತುಂಬ ಸಂತಸವಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪುನರುಚ್ಚರಿಸಿದರು.

ಅನಿವಾರ್ಯ ರಾಜಕೀಯ ಕಾರಣಗಳಿಂದಾಗಿ ನಾನು ದೆಹಲಿಗೆ ಹೋಗಿದ್ದೆ ಮತ್ತು ನಾಲ್ಕೈದು ತಿಂಗಳು ಅಥಣಿ ಗೆ ಬಂದಿಲ್ಲ, ಹೀಗಾಗಿ ಅಥಣಿ ಪಟ್ಟಣದ ಅಭಿವೃದ್ಧಿಯ ವಿಚಾರಗಳಗಾಗಿ ಇಂದು ಅಥಣಿ ಬಂದಿದ್ದೇನೆ ಎಂದು ಹೇಳಿದರು.

ತಮ್ಮ‌ ಮಿತ್ರ ಮಂಡಳಿಯ ಆತ್ಮೀಯ ಅಥಣಿ ಶಾಸಕ ಮಹೇಶ ಕುಮಟ್ಟಳ್ಳಿಯವರನ್ನು ಭೇಟಿಯಾಗಿ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಡಿ ಮಾತ್ನಾಡಿದರು.

ಸುದ್ದಿಗಾರೊಂದಿಗೆ ಮಾತ್ನಾಡಿದ ಮಾಜಿ ಸಚಿವ ರಮೇಶ್ ನಾವು ಮಂತ್ರಿಯಾಗುವ ಯಾವುದೇ ಆಶಾಭಾವನೆ ಇಟ್ಟುಕೊಂಡಿಲ್ಲ ಆದರೆ ಹೈಕಮಾಂಡ್ ನಿರ್ಧಾರಕ್ಕೆ ನಾವು ಯಾವಗಲೂ ಬದ್ದ ಎಂದು ತಿಳಿಸಿದರು.

ರಾಜಕೀಯವಾಗಿ ನಿಮಗೆ ಮತ್ತು ನಿಮ್ಮ ಸಹೋದರ ಹಾಗೂ ಮಿತ್ರರಿಗೆ ಸಚಿವ ಸ್ಥಾನಕ್ಕೆ ಸಿಗಲಿಲ್ಲ‌ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವೆಲ್ಲರೂ ಮಂತ್ರಿ ಭಾಗ್ಯ ವನ್ನು ತ್ಯಾಗ ಮಾಡಿ ಮುಂಬರುವ ೨೦೨೩ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಗತರಾಗಿದ್ದೇವೆ. ಈ ವಿಷಯದಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ ಎಂದು ತಿಳಿಸಿದರು.

ಬಿಜೆಪಿ ಪಕ್ಷದಲ್ಲಿ ನನಗೆ ಹೈಕಮಾಂಡ್ ಹಾಗೂ ಸಂಘದವರು ಕಾಂಗ್ರೆಸ್ ಪಕ್ಷದಗಿಂತ ಪ್ರೀತಿಯಿಂದ ನಡೆದುಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ನಾನು ಬಿಜೆಪಿಯಲ್ಲಿ ಇದ್ದೀನಿ ಎಂದು ಹೇಳಿದರು.

ನಾನು ರಾಜೀನಾಮೆ ಕೊಡವುದಾಗಿ ಹೇಳಿದ್ದು ನಿಜ ಆದರೆ ಸತ್ತೂರು ಶ್ರೀಗಳ ಸಲಹೆ ಮೇರಿಗೆ ನಿರ್ಧಾರ ವಾಪಸ್ಸು ಪಡೆದುಕೊಂಡಿದ್ದೇನೆ.‌ ನನಗೆ ಸಚಿವ ಸ್ಥಾನ ಸಿಗಲಿ ಬಿಡಲಿ ಆದರೆ ಕಾಂಗ್ರೆಸ್ ಪಕ್ಷದ ಸಮ್ಮೀಶ್ರ ಸರಕಾರ ತೆಗೆದಿದ್ದರಿಂದ ರಾಜ್ಯಕ್ಕೆ ಒಳ್ಳೆದು ಮಾಡಿದ್ದೇವೆ ಈ ಖುಷಿ ನಮಗಿದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

14/08/2021 04:56 pm

Cinque Terre

44.07 K

Cinque Terre

6