ಬೆಂಗಳೂರು: ಸದ್ಯ ಬಿಜೆಪಿಯ ನಡೆ ಹಾಗೂ ಅಲ್ಲಿನ ಬೆಳವಣಿಗೆಗಳನ್ನು ಗಮನಸಿದರೆ ಯಾರು ಸಿಎಂ ಆದರೂ ಒಂದು ರೀತಿಯ ಮಕ್ಕಳಾಟ ಆದಂತಾಗಿದೆ. ಶಿಸ್ತಿನ ಪಕ್ಷ ಎಂದು ಹೇಳಲಾಗುವ ಪಕ್ಷದಲ್ಲಿ ಸ್ವಪಕ್ಷೀಯರೇ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಪಿ ಕುಮಾರಸ್ವಾಮಿಯವರು ಒಂದು ಮಾತು ಹೇಳಿದ್ದಾರೆ. ಕುಮಾರಣ್ಣ ಇದ್ದಾಗ ನಮಗೆ ಗೌರವ ಸಿಕ್ತಾ ಇತ್ತು. ಕೆಲಸಗಳು ಆಗ್ತಾ ಇದ್ವು ಆದರೆ ನಮ್ಮ ಸರ್ಕಾರ ಇದ್ದರೂ ಸಹ ಕೆಲಸಗಳು ಆಗ್ತಿಲ್ಲ ಅಂತ ಹೇಳ್ತಾ ಇದ್ದಾರೆ. ಆಂತರಿಕವಾಗಿ ಹಲವಾರು ಶಾಸಕರಿಗೂ ಅದೇ ಭಾವನೆ ಇದೆ . ನನ್ನ ಕಾಲದಲ್ಲಿ ಪ್ರತಿಯೊಬ್ಬರಿಗೂ ಗೌರವ ನೀಡ್ತಿದ್ದೆ ಎಂದರು.
PublicNext
14/08/2021 09:28 am