ನವದೆಹಲಿ: ದೇಶದ ಜನಸಾಮಾನ್ಯರ ವಲಯದಲ್ಲಿ ಆಕ್ರೋಶದ ಬಿರುಗಾಳಿ ಎದ್ದಿದೆ. ರೈತರು, ಕಾರ್ಮಿಕರು ದಲಿತರು, ಶ್ರಮಿಕರ ಧ್ವನಿಯಿಂದ ಮೂಡಿರುವ ಈ ಬಿರುಗಾಳಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೆಸೆಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ದೇಶದಲ್ಲಿ ಈಗ ದಲಿತರು, ರೈತರು ಮತ್ತು ಶ್ರಮಿಕರ ಮಾತುಗಳು ಕೇಳಿಬರುತ್ತಿವೆ. ದಿನೇ ದಿನೇ ಇದು ಹೆಚ್ಚುತ್ತಿದೆ. ಬಿರುಗಾಳಿಯಾಗಿಯೂ ಬದಲಾಗಲಿದೆ. ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದೆ’ ಎಂದು ಹೇಳಿದರು.
ಜನರು ದೇಶದಲ್ಲಿನ ಸದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. ನೀವು ಯಾವುದೇ ಪಡೆಗೆ ಹೆದರುವ ಅಗತ್ಯವಿಲ್ಲ. ಈ ಸವಾಲನ್ನು ಎದುರಿಸಿ ಎಂದು ಧೈರ್ಯ ತುಂಬುವ ಕೆಲಸವನ್ನಷ್ಟೇ ನಾವು ಮಾಡಬೇಕಾಗಿದೆ ಎಂದು ಹೇಳಿದರು.
PublicNext
12/08/2021 10:18 pm