ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು-ಕಾಶ್ಮೀರಕ್ಕೆ ಅದರ ಸ್ಥಾನ ವಾಪಸ್ ಕೊಡಿ: ರಾಹುಲ್ ಗಾಂಧಿ ಒತ್ತಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ 2019ರ ಆಗಸ್ಟ್ ತಿಂಗಳಲ್ಲಿ ರದ್ದುಗೊಳಿಸಿದೆ. ಅದಾದ ನಂತರ ಇದೇ ಮೊದಲ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾಗಿರುವ ಕಣಿವೆಗೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ರಾಹುಲ್ ಆಗ್ರಹಿಸಿದರು.

ತಮ್ಮ ಎರಡು ದಿನಗಳ ಭೇಟಿಯು ಮನೆಗೆ ಮರಳಿದಂತೆ ಆಗಿದೆ ಎಂದ ಅವರು, 'ನೋವು ಮತ್ತು ವೇದನೆ ಅನುಭವಿಸಿರುವ ಜಮ್ಮು ಮತ್ತು ಕಾಶ್ಮೀರ ಜನತೆಯ ಗೌರವ ಹಾಗೂ ಪ್ರೀತಿಯನ್ನು ನಾನು ಬಯಸಿದ್ದೇನೆ. ದಿಲ್ಲಿಗೂ ಮುನ್ನ ನನ್ನ ಕುಟುಂಬವು ಅಲಹಾಬಾದ್‌ನಲ್ಲಿ ನೆಲೆಸಿತ್ತು. ಅದಕ್ಕೂ ಹಿಂದೆ ಅವರು ಕಾಶ್ಮೀರದಲ್ಲಿ ವಾಸಿಸುತ್ತಿದ್ದರು' ಎಂದು ರಾಹುಲ್ ಗಾಂಧಿ ನೆನಪಿಸಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

10/08/2021 06:25 pm

Cinque Terre

51.12 K

Cinque Terre

40

ಸಂಬಂಧಿತ ಸುದ್ದಿ