ಬೆಳಗಾವಿ: ಗಡಿಜಿಲ್ಲಿಯಲ್ಲಿ ಇತ್ತಿಚೀನ ದಿನಗಳಲ್ಲಿ ಅನ್ಯ ಭಾಷಿಕರು ಹಾರಾಟ ಮತ್ತು ಕಿತಾಪತಿಗಳು ಏಕಾಏಕಿ ಕ್ಯಾತೆ ತೆಗೆಯುವುದು ಅವರ ಖಯಾಲಿಯಾಗಿದೆ. ಅದಕ್ಕೆ ಸಾಕ್ಷಿಯಂತೆ ಕರ್ನಾಟಕದ ಗಡಿಜಿಲ್ಲೆಯಾದ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಈಗ ಮತ್ತೊಮ್ಮೆ ತನ್ನ ಕ್ಯಾತಿಯ ಬಾಲ ಬಿಚ್ಚಲು ಮುಂದಾಗಿದೆ.
ಸದಾ ಎನಾದ್ರೂ ಮಾಡಿ ಕನ್ನಡಿಗರ ತಂಟೆಗೆ ಕಾಲ ಕೆರೆದು ಜಗಳವಾಡುವುದು ಮತ್ತು ಮುಖಭಂಗ ಮಾಡಿಸಿಕೊಳ್ಳುವುದು ಇವರಿಗೆ ಸಾಮಾನ್ಯವಾಗಿದೆ. ಆದರು ಈ ಎಮ್ ಇ ಎಸ್ ಪುಂಡರ ಮಾತ್ರ ತಮ್ಮ ಹಳಿ ಚಾಳಿಯನ್ನು ಬಿಡುತ್ತಿಲ್ಲ. ಈಗ ಗಡಿ ವಿವಾದ ಕುರಿತು ಪ್ರಧಾನಮಂತ್ರಿ ಗೆ ಲೇಟರ್ ಅಭಿಯಾನ ಪ್ರಾರಂಭಿಸಿರುವ ನಾಡದ್ರೋಹಿಗಳು, ಗಡಿ ವಿವಾದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ಯರ್ಥ ಪಡೆಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಬೆಳಗಾವಿ ಸೇರಿ ಒಟ್ಟು 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪೋಸ್ಟ್ ಕಾರ್ಡ್ ಅಭಿಯಾನ ಪ್ರಾರಂಭಿಸಿದ್ದಾರೆ. ಭಾಷಾವಾರು ಪ್ರಾಂತ ರಚನೆಯಾದ ದಿನದಿಂದ ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗುತ್ತಿದೆ. 1956 ರಿಂದ ಗಡಿ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ಗಡಿ ವಿವಾದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ಯರ್ಥ ಪಡೆಸಬೇಕೆಂದು ಪತ್ರ ಬರೆದಿರುವ ನಾಡದ್ರೋಹಿಗಳು,
ಪ್ರಧಾನಮಂತ್ರಿಗೆ 11 ಸಾವಿರ ಪತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯು ಇಂತಹ ಕಿತಾಪತಿ ಮಾಡಿದ್ದು. ಇದೇನು ಮೊದಲ್ಲ. ಬೆಳಗಾವಿಯಲ್ಲಿರುವ ಎಂಇಎಸ್ ಪುಂಡರು ಪದೆ ಪದೆ ನಾಡವಿರೋಧಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಇದಕ್ಕೆ ಕನ್ನಡಗರು ವಿರೋಧವನ್ನು ಸಹ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು ಎಂದು ಪತ್ರ ಬರೆದಿರುವ ಎಂ.ಇ.ಎಸ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
PublicNext
10/08/2021 02:13 pm