ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ದಿನದಲ್ಲಿ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ: ಎಂಟಿಬಿ ನಾಗರಾಜ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಇದ್ದಾಗ ನಾನು ವಸತಿ ಸಚಿವ ಆಗಿದ್ದೆ. ಆದ್ರೆ ಅಲ್ಲಿ ರಾಜೀನಾಮೆ ಕೊಟ್ಟು ಬಂದು ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಗಿದ್ದೇನೆ. ಹಾಗಾಗಿ ಅದಕ್ಕಿಂತ ಉನ್ನತವಾದ ಖಾತೆಯನ್ನು ನೀಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ನಿರೀಕ್ಷೆಗೆ ತಕ್ಕಂತೆ ನನಗೆ ಖಾತೆ ಸಿಕ್ಕಿಲ್ಲ. ಹೀಗಾಗಿ ಇನ್ನು ಎರಡ್ಮೂರು ದಿನಗಳಲ್ಲಿ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ವಸತಿ ಖಾತೆಗಿಂತ ಒಳ್ಳೆಯ ಖಾತೆಗಳು ಯಾವುದು ಅನ್ನೋದು ಸಿಎಂಗೆ ಗೊತ್ತಿದೆ. ಲೋಕೋಪಯೋಗಿ, ಇಂಧನ, ಸಾರಿಗೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿಯಂತಹ ಇಲಾಖೆಗಳನ್ನು ನನಗೆ ನೀಡಬಹುದಿತ್ತು. ಆದ್ರೆ ಸಿಎಂ ಬೊಮ್ಮಾಯಿ ಅವರು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ನೀಡಿದ್ದಾರೆ ಎಂದು ಎಂಟಿಬಿ ನಾಗರಾಜ್ ಬೇಸರ ಹೊರ ಹಾಕಿದರು.

ಖಾತೆ ಹಂಚಿಕೆ ಬಗ್ಗೆ ನನಗೆ ಅಸಮಧಾನ ಇದೆ. ಈ ಬಗ್ಗೆ ವರಿಷ್ಟರೊಂದಿಗೆ ಮಾತಾಡುತ್ತೇನೆ. ನನ್ನ ಬಯಕೆ ಏನೆಂಬುದೂ ಸಿಎಂ ಬೊಮ್ಮಾಯಿಗೆ ಗೊತ್ತಿದೆ. ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಎಂಟಿಬಿ ನಾಗರಾಜ ಸ್ಪಷ್ಟವಾಗಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

08/08/2021 01:49 pm

Cinque Terre

68.65 K

Cinque Terre

12