ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿಯಿಂದ ಚಿತ್ರದುರ್ಗಕ್ಕೆ ಅನ್ಯಾಯ; ತಿಪ್ಪಾರೆಡ್ಡಿ ಬೆಂಬಲಿಗರ ಆಕ್ರೋಶ

ಚಿತ್ರದುರ್ಗ: ರಾಜ್ಯದ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದಲ್ಲಿ ಗುರುವಾರ ತಿಪ್ಪಾರೆಡ್ಡಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಬೆಂಬಲಿಗರು ಬಿಜೆಪಿ ಹೈಕಮಾಂಡ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಭಾರಿ ಜಿಲ್ಲೆಯಲ್ಲಿ ಕಮಲ ಅರಳಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾಂಗ್ರೆಸ್ ಆಡಳಿತದಲ್ಲೂ ಪಕ್ಷವನ್ನು ಸದೃಢವಾಗಿ ಕಟ್ಟಿದ ಫಲವಾಗಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಖಾತೆ ತೆರೆದಿದೆ. ಆದರೆ ಇವರನ್ನು ಪಕ್ಷ ಕಡೆಗಣಿಸಿದೆ ಎಂದು ನೋವು ವ್ಯಕ್ತಪಡಿಸಿದರು.

ಐದು ಭಾರಿ ಎಂಎಲ್‍ಎ ಹಾಗೂ ಒಮ್ಮೆ ಎಂಎಲ್‍ಸಿ ಆಗಿರುವುದೇ ಇವರ ಜನಪ್ರಿಯತೆಗೆ ಸಾಕ್ಷಿ. ತನ್ನ ಜೀವನವನ್ನೇ ಕ್ಷೇತ್ರದ ಜನರ ಅಭಿವೃದ್ಧಿಗೆ ಮೀಸಲಿಟ್ಟು ಎಲ್ಲರ ಕಷ್ಟಗಳನ್ನು ಬಗೆಹರಿಸುತ್ತಾ ಜನರ ನೋವಿಗೆ ಧ್ವನಿಯಾಗಿದ್ದಾರೆ. ಇಂತಹ ಹೆಮ್ಮಯ ಶಾಸಕರ ಹಿರಿತನಕ್ಕೂ ಬೆಲೆ ಕೊಡದೆ ಸಚಿವ ಸ್ಥಾನದಿಂದ ವಂಚಿಸಲಾಗಿದೆ. ಇದು ಬಿಜೆಪಿ ನಾಯಕರು ಚಿತ್ರದುರ್ಗಕ್ಕೆ ಮಾಡಿದ ಅನ್ಯಾಯ ಎಂದು ಧಿಕ್ಕಾರ ಕೂಗಿದರು. ಇನ್ನಾದರೂ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ಪರಿಣಾಮವನ್ನು ಪಕ್ಷ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Edited By : Nagesh Gaonkar
PublicNext

PublicNext

05/08/2021 05:02 pm

Cinque Terre

59 K

Cinque Terre

0

ಸಂಬಂಧಿತ ಸುದ್ದಿ