ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಂಬಾಡಿ ಸುತ್ತ ಅಕ್ರಮ ಗಣಿಗಾರಿಕೆ: ತನಿಖೆ ನಡೆಸಲು ಅಮಿತ್ ಶಾಗೆ ಸುಮಲತಾ ಮನವಿ

ಮಂಡ್ಯ: ಕನ್ನಂಬಾಡಿ ಅಣೆಕಟ್ಟು ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಒತ್ತಾಯಿಸಿ ಸಂಸದೆ ಸುಮಲತಾ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಇಂದು ಶುಕ್ರವಾರ ಸುಮಲತಾ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ನೀಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ಅತಿರೇಕವಾಗಿ ನಡೆಯುತ್ತಿದೆ. ಇದರಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯ ಎದುರಾಗಿದೆ. ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಹಾಗೂ ಈ ಬಗ್ಗೆ ಉನ್ನತ ಹಂತದಲ್ಲಿ ತನಿಖೆ ಕೈಗೊಳ್ಳಲು ಸಮಿತಿ ರಚಿಸಬೇಕು ಎಂದು ಸಂಸದೆ ಸುಮಲತಾ ಮನವಿ ಮಾಡಿದ್ದಾರೆ.

ಇದೇ ವಿಚಾರವಾಗಿ ಇತ್ತೀಚೆಗೆ ಸಂಸದೆ ಸುಮಲತಾ ಹಾಗೂ ಜಿಲ್ಲೆಯ ರಾಜಕೀಯ ನಾಯಕರ ನಡುವೆ ಭಾರಿ ವಾಕ್ಸಮರ ಏರ್ಪಟ್ಟತ್ತು.

Edited By : Nagaraj Tulugeri
PublicNext

PublicNext

30/07/2021 10:59 pm

Cinque Terre

98.35 K

Cinque Terre

12

ಸಂಬಂಧಿತ ಸುದ್ದಿ