ಬೆಂಗಳೂರು: ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್ ಜೆಡಿಎಸ್ ಪರ ಟ್ವೀಟ್ ಮಾಡಿ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಅನಂತ್ ಕುಮಾರ್ ಪತ್ನಿ ಮತ್ತು ಪುತ್ರಿ ನನಗೆ ಸಹೋದರಿ ಸಮಾನರು. ಅವರ ಹೇಳಿಕೆಗೆ ಧನ್ಯವಾದಗಳು, ಈ ಹೇಳಿಕೆಯಿಂದ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ ಎಂದು ಹೇಳುವವರಿಗೆ ಅವರ ಹೇಳಿಕೆ ತಕ್ಕ ಉತ್ತರವಾಗಿದೆ ಎಂದಿದ್ದಾರೆ.
ವಿಜೇತ ಅನಂತ್ ಕುಮಾರ್ ಅವರ ಹೇಳಿಕೆ ನಮ್ಮ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚು ಮಾಡಿದೆ. ರಾಜಕಾರಣದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯಬೇಕಷ್ಟೆ. ಇಂದು ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ವಿದ್ಯಾಮಾನಗಳ ನಡುವೆ ವಿಜೇತ ಅನಂತ್ ಕುಮಾರ್ ಅವರು ಮಾಡಿರುವ ಟ್ವೀಟ್ ಬಹಳ ಮುಖ್ಯವಾಗುತ್ತದೆ. ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಇನ್ನೂ ಶಕ್ತಿಯುತವಾಗಿದೆ ಎಂದು ಅವರು ನೀಡಿರುವ ಅಭಿಪ್ರಾಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
PublicNext
30/07/2021 03:48 pm